ಲೋಕಸಭಾ ಚುನಾವಣೆ : ಬಿಜೆಪಿ ಸೋಲಿಸಿ – ಬಿ.ವಿ.ನಾಯಕರಿಗೆ ಬೆಂಬಲ

ರಾಯಚೂರು.ಏ.15- ಲೋಕಸಭಾ ಚುನಾವಣೆಯಲ್ಲಿ ಕೋಮುವಾದ ಪಕ್ಷ ಬಿಜೆಪಿ ಸೋಲಿಸಿ, ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ರಾಯಚೂರು ಲೋಕಸಭಾ ಅಭ್ಯರ್ಥಿಯಾದ ಸಂಸದ ಬಿ.ವಿ.ನಾಯಕ ಅವರಿಗೆ ದಲಿತ ಸಂಘಟನೆಗಳ ಒಕ್ಕೂಟ ಬೆಂಬಲಿಸುತ್ತೇವೆಂದು ಸಂಚಾಲಕರಾದ ಶರಣಪ್ಪ ದಿನ್ನಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷವೂ ದೇಶದ ಸಂವಿಧಾನ ಆಶಯವನ್ನು ವಿರುದ್ಧ ದಿಕ್ಕಿಗೆ ನಡೆದುಕೊಳ್ಳುತ್ತಿದೆ. ಕಾರ್ಪೊರೇಟ್ ಹಾಗೂ ರಾಷ್ಟ್ರ ವಿರೋಧಿ ಕೈಯಲ್ಲಿ ಸಿಲುಕಿ ದೇಶದ ಜನತೆಯ ಆಶೋತ್ತರಗಳನ್ನು ನುಚ್ಚು ನೂರು ಮಾಡುತ್ತಿದೆ. ಜನ ಸಾಮಾನ್ಯರ ಆರ್ಥಿಕ, ಸಾಮಾಜಿಕ ಬದುಕನ್ನು ಅಲ್ಲೊಲ, ಕಲ್ಲೊಲ ಮಾಡುತ್ತಿದೆಂದು ದೂರಿದರು. ದೇಶದ ರಾಜಕೀಯ ವ್ಯವಸ್ಥೆ ಆದಃಪತನ ಸಾಗುತ್ತಿದ್ದು ಹಾಗೂ ಆರ್ಥಿಕ ಕುಸಿತವಾಗುತ್ತಿದೆ.
ಪ್ರಜಾಪ್ರಭುತ್ವದ 17ನೇ ಲೋಕಸಭಾ ಸ್ಪರ್ಧೆಯೂ ಇದುವರೆಗೂ ಸಂವಿಧಾನ ಆಶಯ ಗಾಳಿಗೆತೂರಿ ಹಾಗೂ ಸಂವಿಧಾನದ ಆಶಯಗಳನ್ನೇ ದ್ವೇಷಿಸಲಾಗುತ್ತಿದೆ. ಸಂಘಟನೆಯೂ ಸಂಸದ ಬಿ.ವಿ.ನಾಯಕ ಅವರಿಗೆ ಬೆಂಬಲಿಸುತ್ತಾ, ಕಾರ್ಯಕರ್ತರು ಸಂಸದರ ಗೆಲುವಿಗಾಗಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆಂದರು.
ಈ ಸಂದರ್ಭದಲ್ಲಿ ಚನ್ನಬಸವ ಯಕ್ಲಾಸಪೂರು, ಶಿವಜ್ಞಾನಿ ಗದ್ವಾಲ್, ಚಿದಾನಂದ ಅರೋಲಿ, ಜಿಂದಪ್ಪ ನಿಲಗಲ್ ಉಪಸ್ಥಿತರಿದ್ದರು.

Leave a Comment