ಲೋಕಸಭಾ ಚುನಾವಣೆ : ಬಂದ್ ಕಾಂಗ್ರೆಸ್ ತಂತ್ರ

ರಾಯಚೂರು.ಸೆ.10- ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ, ಕಾಂಗ್ರೆಸ್ ಅರ್ಧಸತ್ಯ ಹೇಳುವ ಮೂಲಕ ಬಂದ್ ಕರೆ ನೀಡಿ ಜನರ ದಾರಿ ತಪ್ಪಿಸುತ್ತಿದೆಂದು ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಳೆದ 67 ವರ್ಷ ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ 57 ವರ್ಷ ಅಧಿಕಾರ ನಿರ್ವಹಿಸಿದೆ. ತೈಲ ಕ್ಷೇತ್ರದಲ್ಲಿ ಭಾರತ ಸಂಪೂರ್ಣ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ವಿಫಲವಾಗಿದೆ. ಇಂದು ಸಹ ಭಾರತ ಶೇ.82 ರಷ್ಟು ತೈಲ ಆಮದು ಮಾಡಿಕೊಳ್ಳಬೇಕಾಗಿದೆ. ದೂರದೃಷ್ಟಿ ಇಲ್ಲದ ಕಾಂಗ್ರೆಸ್ ಸರ್ಕಾರ ಆಡಳಿತದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆ ಪ್ರಸ್ತುತ ಶೇ.79.35 ಡಾಲರ್ ಕಚ್ಚಾ ತೈಲವಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಶೇ.73.44 ರಷ್ಟು ಹೆಚ್ಚಳವಾಗಿದೆ. ಇಷ್ಟು ಪ್ರಮಾಣದಲ್ಲಿ ತೈಲ ಬೆಲೆ ಹೆಚ್ಚಳವಾದರೂ, ಭಾರತ ಮಾತ್ರ ತೈಲ ಬೆಲೆ ಕೇವಲ ಶೇ.29.58 ರಷ್ಟು ಮಾತ್ರ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರಕ್ಕೆ ದೊರೆತಿರುವುದು ಕೇವಲ ಶೇ.19.48 ರಷ್ಟು ಎನ್ನುವುದು ಅಪಪ್ರಚಾರ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ 8 ರೂ ಸೇಸ್ ವಿಧಿಸಲಾಗಿದ್ದು, ನೇರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂದಾಯವಾಗುತ್ತಿದೆ. ಕೇಂದ್ರವಾಗಲಿ, ರಾಜ್ಯಕ್ಕಾಗಲಿ ಇದರಿಂದ ಯಾವ ಹಣ ವರ್ಗಾವಣೆಯಾಗುತ್ತಿಲ್ಲ. ಈ ಎಲ್ಲಾ ಸತ್ಯಾಸತ್ಯತೆ ಮುಚ್ಚಿಟ್ಟು ಕಾಂಗ್ರೆಸ್ ಬಂದ್ ಕರೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ. 2018 ರಲ್ಲಿ ವಿಶ್ವ ಅನೇಕ ಸವಾಲ್ ಎದುರಿಸುತ್ತಿದೆ. ಅಮೇರಿಕಾದಲ್ಲಿ ಹೆಚ್ಚುತ್ತಿರುವ ಬಡ್ಡಿದರ ಕರೆನ್ಸಿ ಮೌಲ್ಯದಲ್ಲಿ ಕುಸಿತ ಉಂಟಾಗಿ ಆರ್ಥಿಕ ಮೇಲೆ ತೀವ್ರ ಪರಿಣಾಮ ಬೀರಿದೆ.
ರೂಪಾಯಿ ಮೌಲ್ಯ ಕುಸಿತ, ಡಾಲರ್ ಮೌಲ್ಯಯ ಹೆಚ್ಚುವಂತೆ ಮಾಡುತ್ತಿದೆ. ಆದರೆ, ಇದರಲ್ಲಿ ನಮ್ಮ ಪಾತ್ರವಿಲ್ಲವೆಂದು ಸಬೂಬು ನೀಡಿದರು. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಮಾಡಿದ ಅನೇಕ ನ್ಯೂನ್ಯತೆಗಳಿಂದಾಗಿ ದೇಶ ಈ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಮತ್ತು ಮೂಲಭೂತ ಸೌಕರ್ಯ ಒದಗಿಸುವಲ್ಲಿ ನಿರತವಾಗಿದೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಆರ್. ತಿಮ್ಮಯ್ಯ, ಶ್ರೀನಿವಾಸ ರೆಡ್ಡಿ, ಕೆ.ಎಂ.ಪಾಟೀಲ್, ಶಶಿರಾಜ್, ಚಂದ್ರಶೇಖರ ಅವರು ಉಪಸ್ಥಿತರಿದ್ದರು.

Leave a Comment