ಲೋಕಸಭಾ ಚುನಾವಣೆಗೆ ಮಹಿಳೆಯರು ಸಂಘಟಿತರಾಗಬೇಕು

ಚಿತ್ರದುರ್ಗ,ಸೆ,12; ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಸಂಘಟಿತರಾಗಬೇಕೆಂದು ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಶ್ಯಾಮಲಶಿವಪ್ರಕಾಶ್ ಕರೆ ನೀಡಿದರು.
ಜಿಲ್ಲಾ ಮಹಿಳಾ ಮೋರ್ಚದಿಂದ ಬಿಜೆಪಿ.ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಹಿಳೆಯರ ಬೂತ್ ಕಮಿಟಿಯನ್ನು ರಚಿಸಿ ಮಹಿಳಾ ಮೋರ್ಚ ಬಲಪಡಿಸಿ ದೇಶದ ಪ್ರಧಾನಿ ನರೇಂದ್ರಮೋದಿರವರು ಮಹಿಳೆಯರ ರಕ್ಷಣೆಗಾಗಿ ಜಾರಿಗೆ ತಂದಿರುವ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಿಲ್ಲೆಯಾದ್ಯಂತ ಮಹಿಳೆಯರಿಗೆ ತಿಳಿಸಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರಮೋದಿರವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚದಿಂದ ಕೊಡಗಳ್ಳಿಯನ್ನು ದತ್ತು ತೆಗೆದುಕೊಂಡಿದ್ದು, ಆ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತೇನೆ. ಐದುನೂರು ಗಿಡಗಳನ್ನು ಗ್ರಾಮದಲ್ಲಿ ನೆಟ್ಟು ಅರವತ್ತು ವರ್ಷವಾದವರಿಗೆ ಸರ್ಕಾರದಿಂದ ಪಿಂಚಣಿ ಕೊಡಿಸುವ ಕೆಲಸ ಮಾಡಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರಧಾನಿ ಮೋದಿರವರ ಕನಸನ್ನು ನನಸು ಮಾಡಬೇಕಾಗಿದೆ. ಅದಕ್ಕಾಗಿ ಮಹಿಳೆಯರು ಮೊದಲು ಸಂಘಟಿತರಾಗಿ ಎಂದು ತಿಳಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ ಮೇ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಹಿಂದೆ ಎಂದೂ ಕಾಣದ ಗೆಲುವು ಸಾಧಿಸಲಾಗಿದೆ. ಜಿಲ್ಲೆಯ ಏಕೈಕಿ ಮಹಿಳೆ ಪೂರ್ಣಿಮ ಶ್ರೀನಿವಾಸ್‍ರವರನ್ನು ಹಿರಿಯೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡಿರುವುದು ಹೆಗ್ಗಳಿಕೆ ಎಂದು ಸಂತಸ ವ್ಯಕ್ತಪಡಿಸಿದರು.
ನಾಲ್ಕುವರೆ ವರ್ಷದಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿರವರು ಮಹಿಳೆಯರಿಗೆ ನೀಡಿರುವ ವಿಶೇಷ ಯೋಜನೆಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ.ಯನ್ನು ಅಧಿಕಾರಕ್ಕೆ ತರುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು ಎಂದು ಹೇಳಿದರು.
ಉಜ್ವಲ ಯೋಜನೆಯಡಿ ದೇಶದ ಕೋಟ್ಯಾಂತರ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸಿದ್ದಾರೆ. ಜಿಲ್ಲೆಯಲ್ಲಿ ಒಂದು ಲಕ್ಷ 37 ಸಾವಿರ ಮಹಿಳೆಯರಿಗೆ ಅಡುಗೆ ಅನಿಲ ದೊರಕಿದೆ.ಸುಕನ್ಯ ಸಮೃದ್ದಿ ವಿಮೆ, ಇಂದ್ರಧನುಷ್ ಲಸಿಕೆ, ಆಯುಷ್ಮಾನ್ ಭಾರತ ಯೋಜನೆಯಡಿ ಬಡ ಕುಟುಂಬಗಳಿಗೆ ಐದು ಲಕ್ಷ ರೂ.ಗಳವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ತಲಾಖ್‍ಗೆ ಕಡಿವಾಣ ಹಾಕಿ ಮುಸ್ಲಿಂ ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಪ್ರಧಾನಿ ಮೋದಿರವರು ಕಾನೂನು ಜಾರಿಗೆ ತಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಗುಣಗಾನ ಮಾಡಿದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದೊಂದು ಸೀಟು ಮುಖ್ಯವಾಗಿರುವುದರಿಂದ ಪ್ರಧಾನಿ ಮೋದಿರವರ ಜನಪರ ಯೋಜನೆಗಳನ್ನು ವಿಶೇಷವಾಗಿ ಮಹಿಳೆಯರಿಗೆ ತಲುಪಿಸಿ ಮತ್ತೆ ಕೇಂದ್ರದಲ್ಲಿ ಬಿಜೆಪಿ. ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ಪ್ರತಿ ಮಂಡಲಗಳಲ್ಲಿ ಸಭೆ ನಡೆಸಿ ಪಕ್ಷದ ಪರವಾಗಿ ಕೆಲಸ ಮಾಡದವರನ್ನು ಮಾತನಾಡಿಸಿ ಒಮ್ಮೆ ಅವಕಾಶ ಕೊಡಿ ಆಗಲು ಪಕ್ಷದ ಗೆಲುವಿಗೆ ಶ್ರಮಿಸದವರನ್ನು ಬದಲಾವಣೆ ಮಾಡಿ ಉತ್ಸಾಹದಿಂದ ಕೆಲಸ ಮಾಡುವವರಿಗೆ ಅವಕಾಶ ಕೊಡೋಣ. ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಒಂಬತ್ತು ಮಹಿಳೆಯರು ಗೆದ್ದಿದ್ದಾರೆ. ಹೊಸದುರ್ಗದಲ್ಲಿ ಹತ್ತು ಮಹಿಳೆಯರು ಗೆದ್ದಿದ್ದಾರೆ. ಜಿ.ಪಂ., ತಾ.ಪಂ.ಸದಸ್ಯರುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಬಿಜೆಪಿ.ಯನ್ನು ಕೇಂದ್ರದಲ್ಲಿ ಮತ್ತೆ ಗೆಲ್ಲಿಸೋಣ ಎಂದರು.ಬಸಮ್ಮ, ವಕ್ತಾರ ನಾಗರಾಜ್‍ಬೇದ್ರೆ, ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಾರದ ವೇದಿಕೆಯಲ್ಲಿದ್ದರು.

Leave a Comment