ಲೈಫ್ ೩೬೦ ಹಾಡುಗಳು

ಯುವಕರೆ ಸೇರಿಕೊಂಡು ಸಿದ್ದಪಡಿಸಿರುವ ‘ಲೈಫ್ ೩೬೦’ ಹಾಡುಗಳು ಬಿಡುಗಡೆಯಾಗಿವೆ,ಚಿತ್ರದ ಐದು ಹಾಡುಗಳಿಗೆ ನಿರ್ದೇಶಕ ಅರ್ಜುನ್ ಕಿಶೋರ್‌ಚಂದ್ರ ಸಾಹಿತ್ಯ ಬರೆದಿದ್ದಾರೆ. ಅವರು ಇಂಜನಿಯರಿಂಗ್ ಓದುತ್ತಿರುವಾಗ ನೋಟ್ ಬುಕ್ ಕೊನೆ ಪುಟದಲ್ಲಿ ತೋಚಿದ್ದನ್ನು ಗೀಚಿದ್ದ ಒಂದಷ್ಟು ವಿಷಯಗಳನ್ನು  ಗೆಳಯರಿಗೆ ತೋರಿಸಿದಾಗ ಸಿನಿಮಾ ಮಾಡಲು ಹುರಿದುಂಬಿಸಿದ್ದರು.

ಟಿನೇಜ್ ಹುಡುಗ,ಹುಡುಗಿಯರ ಮೋಜು, ಮಸ್ತಿ, ಗೆಳತನ, ಮೋಸ ಎಲ್ಲವನ್ನು  ಹೇಳುವ ಪ್ರಯತ್ನ ಮಾಡಲಾಗಿದೆ. ಪ್ರೀತಿಸಿದವಳು  ಕೈಕೊಟ್ಟಾಗ, ಮತ್ತೊಬ್ಬಳ ಪ್ರವೇಶವಾಗುತ್ತದೆ. ಇದರಿಂದ ಜೀವನವನ್ನು ಕಂಡುಕೊಳ್ಳಲು ದೂರದ ಪ್ರಯಾಣ ಮಾಡುವಾಗ ಒಂದಷ್ಟು  ವ್ಯಕ್ತಿಗಳು ಭೇಟಿಯಾಗಿ ಅವರಿಂದ ಬದಲಾವಣೆಗೊಂಡು ಹೇಗೆ ಪರಿಪೂರ್ಣ ಮನುಷ್ಯನಾಗುತ್ತಾನೆ ಎಂಬುದು ಸಿನಿಮಾದ ತಿರುಳು ಎನ್ನುತ್ತಾರೆ ಅರ್ಜುನ್ ಕಿಶೋರ್‌ಚಂದ್ರ.

ಚಿತ್ರಕ್ಕೆ ರಾಜ್ಯದ ೨೨ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಒಂದೊಂದು ಬಾರಿ ಟ್ರಕ್ಕಿಂಗ್ ಹೋದಂತೆ ಕಾರಿನಲ್ಲಿ ಹೋಗಿ ಚಿತ್ರೀಕರಣ ನಡೆಸಿರುವುದು ವಿಶೇಷ ಎಂದರು ನಾಯಕನ ಪಾತ್ರ ಕೂಡ ಮಾಡುತ್ತಿರುವ ಅರ್ಜುನ್. ಚಾರ್ಟಡ್ ಅಕೌಂಟೆಂಟ್ ಪ್ರಜ್ವಲ್, ಎಂಬಿಎ ಪದವೀಧರ ಮಹಾಂತ್ ಸೇರಿ ಮೂವರು ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಮೂರು ಜನರೊಂದಿಗೆ ಕೊನೆ ಹಂತದ ಚಿತ್ರೀಕರಣ ನಡೆಸಿದ್ದು ಚಾಲೇಂಜಿಂಗ್ ಆಗಿತ್ತು ಎಂದರು  ಛಾಯಗ್ರಾಹಕ ಅನಿಲ್‌ಕುಮಾರ್. ನಾಯಕಿಯರಾದ ಅನುಷಾ, ಪಾಯಲ್‌ರಾಧಕೃಷ್ಣ ಸಿನಿಮಾ ಶುರುವಾದಾಗ ಇಬ್ಬರಿಗೂ ಹೊಸ ಅನುಭವ. ಇಂದು ಅವರ ಸಿನಿಮಾಗಳು ಬಿಡುಗಡೆಯಾಗಿರುವುದು ಸಂತಸ ತಂದಿದೆಯಂತೆ.

ಆಡಿಯೋ ಬಿಡುಗಡೆ ಮಾಡಿದ ನೀನಾಸಂ ಸತೀಶ್ ಪ್ರಯಾಣದ ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದೆ. ಇವರ ಕತೆ ಕೇಳಿ ಸದ್ಯ ಪ್ರಾಜಕ್ಟ್‌ನ್ನು  ತಾತ್ಕಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ಐದು ವರ್ಷಗಳ ನಂತರ ನೋಡೋಣ ಹೊಸಬರಿಗೆ ಎಷ್ಟು ಕಷ್ಟ ಅಂತ ಲೂಸಿಯಾ ಮಾಡುವಾಗ ತಿಳಿಯಿತು ಎಂದು ಘಟನೆ ಹೇಳಿ ತಂಡಕ್ಕೆ ಶುಭಹಾರೈಸಿದರು.

ಹುಡುಗರ ಬೆಂಬಲಕ್ಕೆ ನಿಂತವರು ನಿರ್ಮಾಪಕ ರಾಜಶೇಖರ್. ಇದಕ್ಕೂ ಮುನ್ನದ ಟ್ರೇಲರ್, ಹಾಡಿನ ತುಣಕನ್ನು ತೋರಿಸಲಾಯಿತು. ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.

Leave a Comment