ಲೈಂಗಿಕ ಜೀವನಕ್ಕೆ ಪುಷ್ಟಿ ನೀಡುವ ತಿನಿಸುಗಳು

ಯುವ ದಂಪತಿಗಳಲ್ಲಿ ಲೈಂಗಿಕ ಜೀವನ ಚೆನ್ನಾಗಿದ್ದರೆ ಬದುಕು ಸರಾಗವಾಗಿರುತ್ತದೆ. ಲೈಂಗಿಕ ತೃಪ್ತಿ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಪ್ರಮುಖವಾದದ್ದು, ಆದರೆ, ಹಲವರು ತಮ್ಮ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದಾಗಿ ಲೈಂಗಿಕ ಜೀವನದಲ್ಲಿ ಸೋಲುತ್ತಾರೆ. ಇದರಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಕೆಲ ಆಹಾರಗಳು ಲೈಂಗಿಕ ಕ್ರಿಯೆಯ ಶಕ್ತಿ ಮತ್ತು ಮಾನಸಿಕ ಸ್ಥೈರ್ಯ ತುಂಬಲು ಸಹಕಾರಿಯಾಗುತ್ತದೆ.ಇಂತಹ ಕೆಲ ಆಹಾರಗಳ ಮಾಹಿತಿ ಇಲ್ಲಿದೆ.
ಬಾದಾಮಿ ಮತ್ತು ವಾಲ್ನಟ್‘ಗಳಲ್ಲಿ ಸೆಕ್ಸ್ ಹಾರ್ಮೋನ್ ಉತ್ಪಾದನೆಗೆ ಬೇಕಾದ ಮೆಲಟೋನಿನ್ ಮತ್ತು ಗುಡ್ ಕೊಲೆಸ್ಟ್ರಾಲ್, ಪೋಷಕಾಂಶಗಳ ಪ್ರಮಾಣ ಹೆಚ್ಚಿರುತ್ತದೆ. ಬಾದಾಮಿ ಕೇವಲ ಲೈಂಗಿಕತೆಗೆ ಅಷ್ಟೇ ಅಲ್ಲ. ನಪುಂಸಕತೆ ಮತ್ತು ಗರ್ಭಪಾತವನ್ನೂ ತಡೆಯುತ್ತದೆ. ಅಧಿಕ ಪ್ರಮಾಣದ ವಿಟಮಿನ್ ಇ ಒದಗಿಸುತ್ತದೆ.
ಸಿಟ್ರಸ್ ಫ್ರೂಟ್ಸ್: ನಿಂಬೆ, ಕಿತ್ತಳೆ ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಫ್ರೂಟ್‘ಗಳನ್ನ ಸೇವಿಸುವುದರಿಂದ ಹಾಸಿಗೆಯಲ್ಲಿ ನಿಮ್ಮ ಆತ್ಮಸ್ಥೈರ್ಯ ಮತ್ತು ಶಕ್ತಿ ಉತ್ತಮಗೊಳ್ಳುತ್ತದೆ.
ಬೆರ್ರಿಸ್: ಸ್ಟ್ರಾಬೆರಿಯಂತಹ ವಿಶಿಷ್ಟ ಹಣ್ಣುಗಳು ಹೇರಳವಾದ ಫೊಲೇಟ್ ಮತ್ತು ವಿಟಮಿನ್-ಸಿ ಒಳಗೊಂಡಿದ್ದು, ಇದು ಪುರುಷ ಮತ್ತು ಮಹಿಳೆಯರಿಬ್ಬರ ಹೃದಯ ಸಂಬಂದಿ ಸಮಸ್ಯೆ ನಿವಾರಿಸಿ. ಆಲೋಚನೆ, ಆತ್ಮಸ್ಥೈರ್ಯ ಮತ್ತು ಕ್ರಿಯೆಗಳನ್ನ ಉತ್ತಮಗೊಳಿಸುತ್ತವೆ.
ಡಾರ್ಕ್ ಚಾಕೋಲೆಟ್ ತಿನ್ನುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸಂತಸದ ಭಾವ ಮೂಡುತ್ತದೆ. ಮೆದುಳಿನಲಿ ಲೈಂಗಿಕತೆ ಬೇಕಾದ ರಾಸಯನಿಕದ ಉತ್ಪಾದನೆ ಹೆಚ್ಚಿಸುತ್ತದೆ
ಅವಕಾಡೋ, ಕಿವಿ ಫ್ರೂಟ್: ಈ ಗ್ರಹದಲ್ಲೇ ಅತ್ಯಂತ ಆರೋಗ್ಯಯುತ ಆಹಾರ ಕಿವಿ ಫ್ರೂಟ್ ಎಂಬ ಮಾತಿದೆ. ಮೆದುಳು, ಹೃದಯ ಮತ್ತು ರಕ್ತದ ನಾಳಗಳಿಗೆ ಸೂಪರ್ ಫೂಡ್ ಎಂಬ ಮಾತಿದೆ. ಹಾರ್ಮೋನ್ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಿಂದ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ.
ಈ ಅಹಾgಗಳನ್ನ ನಿತ್ಯವೂ ನಿಗದಿತವಾಗಿ ಸೇವಿಸಬೇಕು ಯಾವುದು ಅತಿಯಾಗಬಾರದು ಅಷ್ಟೇ.

Leave a Comment