ಲೈಂಗಿಕ ಕಿರುಕುಳ; ಸ್ವಾಮೀಜಿ ವಿರುದ್ಧ ಕೇಸ್ ದಾಖಲು

ಚಾತುರ್ಮಾಸ ವ್ರತ ನಿಲ್ಲಿಸಿ ಸ್ವಾಮೀಜಿ ಎಸ್ಕೇಪ್
ಮೈಸೂರು, ಸೆ.9- ಸ್ವಾಮೀಜಿಯೋರ್ವರು ಚಾತುರ್ಮಾಸದ ಪೂಜೆಯ ವೇಳೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾಂಡವಪುರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಕ್ಷೇತ್ರದ ಪೀಠಾಧ್ಯಕ್ಷ ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಮಹಿಳೆಯೋರ್ವರು ಗುರುತರ ಆರೋಪ ಮಾಡಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಇದೀಗ ಚಾತುರ್ಮಾಸ ನಡೆಸುತ್ತಿದ್ದ ಸ್ವಾಮೀಜಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಮೈಸೂರಿನ ಕುವೆಂಪು ನಗರದ ನಿವಾಸಿ ಮಹಿಳೆ ದೂರು ನೀಡಿದ್ದು, ಚಾತುರ್ಮಾಸ ಪೂಜೆಗೆಂದು ಮನೆಗೆ ಬಂದಾಗ ಅತ್ಯಾಚಾರ ನಡೆಸಿದ್ದಾರೆ. ಸ್ವಾಮೀಜಿಗೆ ತನ್ನ ಪತಿಯೇ ಸಹಕಾರ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೆ.4ರಂದು ರಾತ್ರಿ ಸುಮಾರು ಒಂದು ಗಂಟೆಯ ಸಮಯದಲ್ಲಿ ಮನೆಯ ಬೆಲ್ ಮಾಡಿದ್ದು, ಪತಿಯೇ ಬಂದಿರಬಹುದೆಂದು ಬಾಗಿಲು ತೆರೆದೆ. ನನ್ನ ಗಂಡನ ಜೊತೆ ಸ್ವಾಮೀಜಿ ಮತ್ತವನ ಐದಾರು ಚೇಲಾಗಳುಒಳಗೆ ನುಗ್ಗಿದ್ದು, ನನ್ನ ಗಂಡ ಮತ್ತು ಸ್ವಾಮೀಜಿ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದು, ಪ್ರತಿರೋಧವೊಡ್ಡಿದಾಗ ಕಾರಿನಲ್ಲಿಯೇ ನನ್ನನ್ನು ಕುವೆಂಪುನಗರದಲ್ಲಿರುವ ಮೈದುನನ ಮನೆಗೆ ಕರೆದೊಯ್ದು ದಾರಿಯುದ್ದಕ್ಕೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಮೂರು ದಿನಗಳ ಒಳಗೆ ಸೇವೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು ಮಹಿಳೆಯ ದೂರು ದಾಖಲಿಸಿ ಐಪಿಸಿ ಸೆಕ್ಷನ್ 364 ಂ 354 ಂ 143 504 448 506 307 364 363 323 ನಡಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕಳೆದ ರಾತ್ರಿ ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಚಾತುರ್ಮಾಸ ದಿಂದ ಸ್ವಾಮೀಜಿ ದೂರ ಉಳಿದಿದ್ದಾರೆ ಎನ್ನಲಾಗಿದೆ.

Leave a Comment