ಲೈಂಗಿಕ ಕಿರುಕುಳ ಸಚಿವ ಅಕ್ಬರ್ ತಲೆದಂಡ ಖಚಿತ

ನವದೆಹಲಿ, ಅ. ೧೧- ಮಾಜಿ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಸುಳಿಗೆ ಸಿಲುಕಿರುವ ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವ ಎಂ.ಜೆ. ಅಕ್ಬರ್ ತಲೆದಂಡವಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ದೇಶಾದ್ಯಾಂತ್ಯ ಮಿಟು ಲೈಂಗಿಕ ದೌರ್ಜನ್ಯದ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದರಿಂದ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಅಕ್ಬರ್ ರಾಜೀನಾಮೆಗೆ ಒತ್ತಡಗಳು ತೀವ್ರಗೊಂಡಿವೆ.
ನಿನ್ನೆ ತಡರಾತ್ರಿ ನೈಜೀರಿಯಾ ಪ್ರವಾಸದಿಂದ ವಾಪಸ್ ಬಂದಿರುವ ಅವರ ರಾಜೀನಾಮೆ ನೀಡುವಂತೆ ವ್ಯಾಪಕ ಒತ್ತಡಗಳು ಬಂದಿವೆ ಎಂದು ಉಲ್ಲೇಖಿಸಿ ಮುಂಬೈ ಮಿರರ್ ಪತ್ರಿಕೆ ವರದಿ ಮಾಡಿದೆ.
ಮಂತ್ರಿ ಮಂಡಲದ ಸಚಿವರೊಬ್ಬರೇ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿರುವುದರಿಂದ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ ಎಂದು ಬಿಜೆಪಿ ಹಾಗೂ ಆರ್ಎಸ್‌ಎಸ್ ದೂರಿದೆ ಎಂದು ಮೂಲಗಳು ತಿಳಿಸಿವೆ.
ಎಂಜೆ ಅಕ್ಬರ್ ವಿರುದ್ಧ 9 ಮಂದಿ ಮಹಿಳೆಯರು ಲೈಂಗಿಕ ದೌರ್ಜನ್ಯ ನೀಡುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಅರೋಪಕ್ಕೆ ಸ್ವತಃ ಎಂ.ಜೆ ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಸ್ಪಷ್ಟೀಕರಣ ನೀಡುವಂತೆಯೂ ಕೇಂದ್ರ ಸರ್ಕಾರ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಎಂ.ಜೆ ಅಕ್ಬರ್ ಆಂಗ್ಲ ಪತ್ರಿಕೆಯ ಸಂಪಾದಕರಾಗಿದ್ದರು. ಎಂ.ಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಕೇಳಿ ಬಂದಿದ್ದವು. ಈಗ ಅವರು ನೈಜೀರಿಯಾ ಪ್ರವಾಸದಿಂದ ಸ್ವದೇಶಕ್ಕೆ ವಾಪಸ್ ಬಂದಿದ್ದಾರೆ. ಈ ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಸರ್ಕಾರ ಸಚಿವ ಅಕ್ಬರ್ ಗೆ ಸೂಚಿಸಿದೆ.

Leave a Comment