ಲೇಹ್, ಮುಘಲ್ ರಸ್ತೆಗಳು ಬಂದ್

ಶ್ರೀನಗರ, ಜ.೧೨- ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಏಕಮುಖ ಸಂಚಾರ ಪುನರಾರಂಭವಾಗಿದೆ. ಹಿಮಪಾತದಿಂದಾಗಿ ೩೦೦ ಕಿಲೋಮೀಟರ್ ಉದ್ದದ ಹೆದ್ದಾರಿಯಲ್ಲಿ ೨,೦೦೦ ಕ್ಕೂ ಹೆಚ್ಚು ವಾಹನಗಳು ನಿಂತಿದ್ದವು.
ಲಡಾಖ್ ಮತ್ತು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ, ೮೬ ಕಿಲೋಮೀಟರ್ ಉದ್ದದ ಮುಘಲ್ ರಸ್ತೆ ಹಿಮಾವೃತವಾಗಿ ಕಳೆದೊಂದು ತಿಂಗಳಿನಿಂದ ಮುಚ್ಚಿತ್ತು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮುವಿನಿಂದ ಶ್ರೀನಗರಕ್ಕೆ ವಾಹನ ಸಂಚಾರಕ್ಕೆಅನುವು ಮಾಡಿಕೊಡಲಾಗಿದ್ದು, ವಿರುದ್ಧ ದಿಕ್ಕಿನಿಂದ ಭದ್ರತಾ ಪಡೆ ವಾಹನ ಸೇರಿದಂತೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಲಘು ವಾಹನಗಳಿಗೆ ಜಮ್ಮುವಿನಿಂದ ಬೆಳಗ್ಗೆ ೫ ಗಂಟೆಯಿಂದ ಸಂಚಾರಕ್ಕೆ ಅವಕಾಶವಿದ್ದು, ಮಧ್ಯಾಹ್ನ ೧.೩೦ರ ವೇಳೆಗೆ ಉಧಂಪುರ್ ತಲುಪಬೇಕಿದೆ. ಅದೇ ರೀತಿ ಭಾರೀ ವಾಹನಗಳಿಗೆ ಮಧ್ಯಾಹ್ನ ೧ ರಿಂದ ಸಂಜೆ ೭ ರವರೆಗೆ ಸಂಚಾರಕ್ಕೆ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Comment