ಲೀ

ಸಾರಥಿ ಸತೀಶ, ದರ್ಶನ್ ಕೃಷ್ಣ ಎಸ್.ಬಿ.ವಿನಯ್ ನಿರ್ಮಿಸಿರುವ ಹೆಚ್.ಎಂ.ಶ್ರೀನಂದನ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಲೀ ಚಿತ್ರಈ ವಾರ ಬಿಡುಗಡೆಯಾಗಿದೆ “ಉಷ್ ಎಂಬ ಸಾಹಸ ಕಲೆಯ ಹಿನ್ನೆಲೆ ಹೊಂದಿರವ ಈ ಚಿತ್ರಕ್ಕೆ ಗುರುಕಿರಣ್ ಆನಂದರಾಜ ವಿಕ್ರಮ್ ಸಂಗೀತ ನೀಡಿದ್ದಾರೆ. ಸುಮಂತ್ ಶೈಲೇಂದ್ರ ನಾಯಕನಾಗಿರುವ ಈ ಚಿತ್ರಕ್ಕೆ ನಭಾನಟೇಶ್ ನಾಯಕಿಯಾಗಿದ್ದಾರೆ.ವಜ್ರಕಾಯದ ನಂತರ ಎರಡನೇ ಚಿತ್ರ ಲೀ ಯಲ್ಲಿ ನಟಿಸುತ್ತಿರುವ ನಭಾನಟೇಶ್ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ಲೀ  ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ನಭಾ ಚಿತ್ರದ ಬಗ್ಗೆ ತುಂಬ ನಿರೀಕ್ಷೆ ಇದೆ ಹೊಸ ವರ್ಷದ ಆರಂಭದಲ್ಲಿಯೇ ರಿಲೀಸ್ ಆಗುತ್ತಿರುವುದು ಮತ್ತಷ್ಟು ಖುಷಿ ನೀಡಿದೆ. ನನ್ನ ನಿರೀಕ್ಷೆ ಫಲಿಸುತ್ತದೆ ಎಂಬ ನಂಬಿಕೆ ಇದೆ. ನನ್ನ ಕರಿಯರ್‌ಗೆ ಒಂದು ಮಹತ್ವವಾದ ಚಿತ್ರ ಇದಾಗಲಿದೆ ಎನ್ನುತ್ತಾರೆ.
ಇದೊಂದು ಕಂಪ್ಲೀಟ್ ಪ್ಯಾಕೇಜ್ ಸಿನಿಮಾ. ಪ್ರೇಕ್ಷಕರು ನೀಡುವ ದುಡ್ಡಿಗೆ ಎರಡೂವರೆ ಗಂಟೆ ಬರೀ ಮನರಂಜನೆ ಸಿಗುತ್ತದೆ. ರೊಮ್ಯಾನ್ಸ್, ಆಕ್ಷನ್, ಕಾಮಿಡಿ ಹೀಗೆ ಎಲ್ಲ ರೀತಿಯ ಅಂಶಗಳು ಚಿತ್ರದಲ್ಲಿವೆ ನನ್ನ ಹಿಂದಿನ ಸಿನಿಮಾಕ್ಕಿಂತ ಇಲ್ಲಿ ನನ್ನದು ತುಂಬ ಡಿಫರೆಂಟ್ ಪಾತ್ರ. ಎಲ್ಲರಿಗೂ ಇಷ್ಟವಾಗುವಂತಹ ಮನೆಮಗಳು ರೀತಿಯ ಪಾತ್ರ.ನನ್ನ ಮ್ಯಾನರಿಸಂ, ಡೈಲಾಗ್ ಹೇಳುವ ಶೈಲಿ ಎಲ್ಲವೂ ವಿಭಿನ್ನವಾಗಿರಲಿದೆ.

ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ. ನಮ್ಮದು ಒಂದು ಯಂಗ್ ಟೀಮ್ ನಿರ್ದೇಶಕ ಶ್ರೀನಂದನ್ ತುಂಬ ಫ್ರೆಂಡ್ಲಿಯಾಗಿದ್ದರು. ನಟ ಸುಮಂತ್ ಜತೆ ಕೆಲಸ ಮಾಡುವುದೇ ಖುಷಿ ವಿಚಾರ. ಚಿತ್ರೀಕರಣಕ್ಕೂ ಮೊದಲು ನಾವು ಸಾಕಷ್ಟು ತಯಾರಿ ತೆಗೆದುಕೊಳ್ಳುತ್ತಿದ್ದೆವು. ಸುಮಂತ್ ಜತೆಗೆ ತುಂಬ ಚರ್ಚೆ ಮಾಡುತ್ತಿದ್ದೆ. ಇದರಿಂದ ಕ್ಯಾಮೆರಾ ಮುಂದೆ ನಟಿಸುವುದಕ್ಕೆ ಸುಲಭವಾಗುತ್ತಿತ್ತು. ಅವರ ಜತೆ ಕೆಲಸ ಮಾಡುವಾಗ ಕಂಫರ್ಟ್ ಜೋನ್ ಇರುತ್ತದೆ ಎನ್ನುತ್ತಾರೆ ನಭಾ.
ಹಾಡಿನ ಚಿತ್ರೀಕರಣಕ್ಕಾಗಿ ನಾವು ಮಲೇಷ್ಯಾಕ್ಕೆ ಹೋಗಿದ್ದೆವು. ಆದರೆ ಮೊದಲ ದಿನವೇ ಕಾಲಿಗೆ ಪೆಟ್ಟಾಗಿತ್ತು. ನನ್ನ ಮೊದಲ ರೊಮ್ಯಾಂಟಿಕ್ ಸಾಂಗ್ ಅದು. ಹಾಗಾಗಿ, ಕಾಲಿಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ಶೂಟಿಂಗ್ ಮುಗಿಸಿದೆವು ಎಂದರು..

Leave a Comment