ಲಿಬಿಯಾ ಸೇನೆಯಿಂದ ಏಳು ಉಗ್ರರ ಹತ್ಯೆ

ಟ್ರಿಪೋಲಿ, ಫೆ.12- ಲಿಬಿಯಾದ ದರ್ನ ನಗರದಲ್ಲಿ ಇಲ್ಲಿನ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸೋಮವಾರ 7 ಮಂದಿ ಉಗ್ರರು ಬಲಿಯಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

 

ಕೇಂದ್ರ ದರ್ನ ನಗರದಲ್ಲಿ ಭಾನುವಾರದಿಂದ ಸೋಮವಾರ ಮಧ್ಯಾಹ್ನದವರೆಗೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಕಾದಾಟ ನಡೆದಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿವೆ.

ನಮ್ಮ ಯೋಧರು ಏಳು ಮಂದಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಕಡೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸೇನೆಯ ಮೂಲಗಳು ಸ್ಪಷ್ಟಪಡಿಸಿವೆ.

ಉಳಿದ ಉಗ್ರರಿಗಾಗಿ ಕಾರ್ಯಾಚರಣೆ  ಮುಂದುವರಿಸಲಾಗಿದ್ದು, ಇನ್ನು ಕೆಲವು ದಿನಗಳಲ್ಲಿ ಈ ಕಾರ್ಯಾಚರಣೆ ಮುಕ್ತಾಯವಾಗಲಿದೆ ಎಂದು ಅವು ತಿಳಿಸಿವೆ.

ಕಳೆದ ವಾರ ದರ್ನದಲ್ಲಿ ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 12 ಮಂದಿ ಸೈನಿಕರು ಹುತಾತ್ಮರಾಗಿದ್ದರು ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ.

ಜನರಲ್ ‍ಖಲೀಫಾ ಹಫ್ತರ್ ನೇತೃತ್ವದ ಪೂರ್ವ ಸರ್ಕಾರದ ಸೇನೆ ಈ ಕಾರ್ಯಾಚರಣೆ ನಡೆಸಿದೆ.

 

Leave a Comment