ಲಿಪ್ ಲಾಕ್’ ಕೇವಲ ಅಭಿನಯ ಎಂದ ರಶ್ಮಿಕಾ

 


ಬೆಂಗಳೂರು, ಜುಲೈ 12 – ‘ಕಿರಿಕ್’ ಸುಂದರಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’ ಚಿತ್ರ ಇದೇ 16ರಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ ಶುಕ್ರವಾರ ಕನ್ನಡ ಭಾಷೆಯ ಟ್ರೇಲರ್ ಬಿಡುಗಡೆಯಾಗಿದ್ದು ‘ಗೀತ ಗೋವಿಂದಂ’ ಚಿತ್ರದಂತೆ ‘ಡಿಯರ್ ಕಾಮ್ರೇಡ್’ ನಲ್ಲಿಯೂ ರಶ್ಮಿಕಾ ಹಾಗೂ ದೇವರಕೊಂಡ ಕಿಸ್ಸಿಂಗ್ ಹಾಗೂ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ
ಕಿಸ್ಸಿಂಗ್ ಸೀನ್ ಇಲ್ಲದ ಯಾವುದೇ ಚಿತ್ರಗಳಲ್ಲಿ ನೀವು ಅಭಿನಯಿಸುವುದಿಲ್ಲವೇ ಎಂಬ ಪ್ರಶ್ನೆಗೆ “ಕಿಸ್ಸಿಂಗ್ ಕೂಡ ಕೋಪ ತಾಪ, ನಗು, ಅಳುವಿನಿಂತೆ ಭಾವನೆಯ ಅಭಿವ್ಯಕ್ತಿ ಅದನ್ನು ಬೇರೆ ದೃಷ್ಟಿಯಿಂದ ನೋಡುವುದು ಬೇಡ ಸ್ಕ್ರಿಪ್ಟ್ ನಲ್ಲಿ ಇದ್ದ ಹಾಗೆ, ನಿರ್ದೇಶಕರು ಸೂಚಿಸಿದ ಹಾಗೆ ಅಭಿನಯಿಸುವುದು, ಪಾತ್ರಕ್ಕೆ ಜೀವ ತುಂಬುವುದು ನಟ,ನಟಿಯರ ಕರ್ತವ್ಯ” ಎಂದು ದೇವರಕೊಂಡ ಹೇಳಿದರು
ರಶ್ಮಿಕಾ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, “ಚಿತ್ರವನ್ನು ಸಂಪೂರ್ಣ ವೀಕ್ಷಿಸಿದರೆ ಬಾಬ್ಬಿ(ದೇವರಕೊಂಡ) ಲಿಲ್ಲಿ(ರಶ್ಮಿಕಾ ಭಾವನೆಗಳು ಅರ್ಥವಾಗುತ್ತವೆ ಕಿಸ್ಸಿಂಗ್ ಸೀನ್ ಪಾತ್ರಕ್ಕೆಅಗತ್ಯವಿದ್ದ ಕಾರಣ ಅಳವಡಿಸಿಕೊಳ್ಳಲಾಗಿದೆಯೇ ಹೊರತು ಅನಗತ್ಯವಾಗಿ ಅಥವಾ ಬಲವಂತವಾಗಿ ತುರುಕಿಲ್ಲ” ಎಂದರು
‘ಡಿಯರ್ ಕಾಮ್ರೇಡ್’ ಮ್ಯೂಸಿಕ್ ಫೆಸ್ಟಿವೆಲ್ ಗೆ ಯಶ್ ಚಾಲನೆ
‘ಡಿಯರ್ ಕಾಮ್ರೇಡ್’ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಡಿಟೋರಿಯಂನಲ್ಲಿ ‘ಮ್ಯೂಸಿಕಲ್ ಫೆಸ್ಟಿವಲ್’ ಆರಂಭವಾಗಲಿದೆ ರಾಕಿಂಗ್ ಸ್ಟಾರ್ ಯಶ್ ಚಾಲನೆ ನೀಡಲಿದ್ದಾರೆ ಇದೇ ವೇಳೆ ಅಧಿಕೃತವಾಗಿ ಟ್ರೇಲರ್ ಕೂಡ ಲಾಂಚ್ ಆಗಲಿದೆ ಎಂದು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾಹಿತಿ ನೀಡಿದರು.
ಬಾಲ್ಯದ ಗೆಳತಿ, ಪ್ರೇಮಿ ಲಿಲ್ಲಿ ತಾನಿಷ್ಟಪಟ್ಟಿದ್ದನ್ನು ಪಡೆಯಲು ಹೋರಾಡುವಂತೆ ಪ್ರೇರೇಪಿಸುವ ಹಾಗೂ, ಕಾಲೇಜಿನ ರಾಜಕೀಯ ಅನ್ಯಾಯಗಳ ಬಗ್ಗೆ ದನಿಯೆತ್ತುವ ವಿದ್ಯಾರ್ಥಿ ಯೂನಿಯನ್ ಲೀಡರ್ ಪಾತ್ರದಲ್ಲಿ ದೇವರಕೊಂಡ ಕಾಣಿಸಿಕೊಂಡಿದ್ದಾರೆ.
ತಾರಾಗಣದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಶ್ರುತಿ ರಾಮಚಂದ್ರ, ಚಾರುಹಾಸನ್ ಮೊದಲಾದವರಿದ್ದಾರೆ.

Leave a Comment