ಲಿಂಗಸೂಗೂರು-ಬಳ್ಳಾರಿ : ರೈಲು ಮಾರ್ಗಕ್ಕೆ ಮನವಿ

ರಾಯಚೂರು.ಅ.23- ಬಳ್ಳಾರಿಯಿಂದ ಲಿಂಗಸೂಗೂರು ವಯಾ ಸಿರಗುಪ್ಪ-ಸಿಂಧನೂರು ಮಾರ್ಗವಾಗಿ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು, ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಮಾಡಿದರು.
ಈ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆ ವರದಿ ಅನ್ವಯ 132 ಕಿ.ಮಿ. ಪ್ರಸ್ತಾವನೆಯನ್ನು ಬೆಂಗಳೂರು ರೈಲ್ವೆ ಬೋರ್ಡ್‌ಗೆ ಸಲ್ಲಿಸಲಾಗಿದೆ. ಜಿಲ್ಲೆಯೂ ಹಿಂದುಳಿದ ಪ್ರದೇಶವಾಗಿದ್ದು, 371 (ಜೆ) ಅನ್ವಯ ವಿಶೇಷ ಸ್ಥಾನಮಾನ ನೀಡಲಾಗಿದೆ. ಲಿಂಗಸೂಗೂರು ತಾಲೂಕು ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು, ರೈಲ್ವೆ ಸಂಪರ್ಕ ಹೊಂದಿಲ್ಲ. ಈ ಭಾಗದಲ್ಲಿ ರೈಲ್ವೆ ಅತ್ಯಂತ ಅಗತ್ಯವಾಗಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಂಡು ನೂತನ ರಾಡ್ ಗೇಜ್ ಮಾರ್ಗವನ್ನು ಬಳ್ಳಾರಿ-ಲಿಂಗಸೂಗೂರು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Leave a Comment