ಲಿಂಗನಮಕ್ಕಿ, ತುಂಗ, ಭದ್ರ ಡ್ಯಾಂಗಳು ಅಪಾಯ ಮಟ್ಟದಲ್ಲಿ..

ಶಿವಮೊಗ್ಗ.ಆ.೧೬; ಮಲೆನಾಡು ಭಾಗಗಳಲ್ಲಿ ಕಳೆದ ಮೂರು ವರ್ಷದಲ್ಲಿ ಆಗದ ಮಳೆ ಈ ಭಾರಿ ಯಥೇಚ್ಚವಾಗಿ ಸುರಿದ ಪರಿಣಾಮ ಲಿಂಗನಮಕ್ಕಿ, ತುಂಗ, ಭದ್ರ ಡ್ಯಾಂಗಳು ತುಂಬಿ ಅಪಾಯ ಮಟ್ಟ ತಲುಪಿವೆ.

ವಾಡಿಕೆ ಮಳೆಯು ಶಿವಮೊಗ್ಗದಲ್ಲಿ ೧೫೯.೬೦ ಮಿಮಿ ಇದ್ದರೆ ಈಗಾಗಲೇ ೯೩.೯೦ ಮಿಮಿ ಮಳೆಯಾಗಿದೆ. ಅದರಂತೆ ಭದ್ರಾವತಿ ೧೩೮ ಮಿಮಿ ಇದ್ದರೆ ೧೧೮ ಮಿಮಿ, ತೀರ್ಥಹಳ್ಳಿಯಲ್ಲಿ ೮೯೩.೩೦ ರಲ್ಲಿ ೭೩೪ ಮಿಮಿ, ಶಿಕಾರಿಪುರದಲ್ಲಿ  ೧೫೧.೫ ಮಿಮಿಗೆ ೧೨೭ಮಿಮಿ, ಸಾಗರದಲ್ಲಿ ೬೧೩.೯೦ ಮಿಮಿಗೆ ೩೮೩ ಮಿಮಿ, ಸೊರಬದಲ್ಲಿ ೩೮೩ ಮಿಮಿ ಮಳೆಯಾಗಬೇಕಿದ್ದಲ್ಲಿ ೨೩೬.೮ ಮಿಮಿ ಮಳೆ ಯಾದರೆ ಹೊಸನಗರದಲ್ಲಿ ೬೦೯.೯ ಮಿಮಿಗೆ ೭೭೦.೭ ಮಿಮಿ ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ಐದು ಗೇಟುಗಳು ತೆರೆದಿದ್ದು ೪೨೪೬೦ ಕ್ಯೂಸೆಕ್ ನೀರು ಒಳ ಹರಿವು ಇದ್ದು ೮೪೫೬ಕ್ಯೂಸೆಕ್ ಹೊರಹರಿವು ನದಿಗೆ ಬಿಡಲಾಗುತ್ತಿದೆ. ೧೮೧೯ ಅಡಿ ಡ್ಯಾಂ ನಲ್ಲಿ ಈಗಾಗಲೇ ೧೮೧೭ ಅಡಿ ಡ್ಯಾಂ ನೀರು ತುಂಬಿದೆ. ಭದ್ರಾ ಡ್ಯಾಂ ೧೮೬ ಅಡಿ ನೀರಿಗೆ ೧೮೪ ಅಡಿ ನೀರು ತುಂಬಿದ್ದು ೪೪ ಸಾವಿರ ಕ್ಯೂಸೆಕ್ಸ್ ನದಿ ನೀರು ನದಿಗೆ ಹರಿದು ಬರುತ್ತಿದ್ದು ೪೬೬೪೫ ಕ್ಯೂಸೆಕ್ಸ ನೀರು ಡ್ಯಾಂ ನಿಂದ ಹೊರಗೆ ನೀರು ಹರಿದು ಬಿಡಲಾಗುತ್ತಿದೆ. ಸಣ್ಣ ಡ್ಯಾಂ ಆಗಿರುವ ಗಾಜನೂರಿನ ಅಣೆ ಕಟ್ಟೆ ೫೦ ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು ೫೨ ಸಾವಿರ ಕ್ಯೂಸೆಕ್ಸ್ ನದಿಯ ಹೊರ ಹರಿವು ಬಿಡಲಾಗುತ್ತಿದೆ.

ಭದ್ರಾವತಿಯ ಹೊಸ ಸೇತುವೆ ಮೇಲೆ ನೀರು ನಿಂತಿದೆ. ಶಿವಮೊಗ್ಗದ ಸೀಗೆಹಟ್ಟಿಯ ಕಬಾರಗುಂಡಿ ಕೆಲ ಭಾಗಗಳಲ್ಲಿ ತುಂಗಾ ನದಿಯ ನೀರಿನಿಂದ ಜಲಾವೃತಗೊಂಡಿದೆ. ತೀರ್ಥಹಳ್ಳಿಯಲ್ಲಿ ಸತತ ಮೂರು ದಿನ ಯಡಬಿಡದೆ ಮಳೆಯಿಂದಾಗಿ ಮನೆ ಗೋಡೆಗಳು ಕುಸಿತಗೊಂಡಿದೆ. ಮನೆ ಗೋಡೆ ಕುಸಿತಕ್ಕೆ ಮಸೂದ್ ಎಂಬ ಐದು ವರ್ಷದ ಬಾಲಕ ಅಸುನೀಗಿದ್ದಾನೆ. ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾಲಕನ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ.

Leave a Comment