ಲಾರ್ಡ್ಸ್‌ ಪಿಚ್‌ ಬಗ್ಗೆ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಬೇಸರ

ಲಂಡನ್‌, ಜು 27 – ಎದುರಾಳಿ ಐರ್ಲೆಂಡ್‌ ಕೇವಲ 38 ರನ್‌ಗಳಿಗೆ ಸರ್ವಪತನವಾಗಿದ್ದು, ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸ್ಪರ್ಧೆ ನಡೆಸಲು ಸಾಧ್ಯವಾಗಿರಲಿಲ್ಲ. ಏಕೈಕ ಟೆಸ್ಟ್‌ ಪಂದ್ಯಕ್ಕೆ ದಿ ಲಾರ್ಡ್ಸ್ ಅಂಗಳ ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ಇಂಗ್ಲೆಂಡ್‌ ತಂಡ ನಾಯಕ ಜೋ ರೂಟ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಐರ್ಲೆಂಡ್‌ ವಿರುದ್ಧ ಶುಕ್ರವಾರ ಏಕೈಕ ಟೆಸ್ಟ್ ಪಂದ್ಯ ಗೆದ್ದ ಬಳಿಕ ಮಾತನಾಡಿದ ರೂಟ್‌, ಲಾರ್ಡ್ಸ್ ಪಿಚ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಹೇಳಲು ನಾನು ಇಷ್ಟಪಡುವುದಿಲ್ಲ. ಏಕೈಕ ಟೆಸ್ಟ್‌ ಪಂದ್ಯಕ್ಕೆ ಈ ಪಿಚ್‌ ಗುಣಮಟ್ಟದಿಂದ ಇರಲಿಲ್ಲ. ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಎರಡಕ್ಕೂ ವಿಭಿನ್ನತೆಯಿಂದ ಕೂಡಿತ್ತು ಎಂದರು.

 ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಕೇವಲ 85 ರನ್‌ ಗಳಿಗೆ ಆಲೌಟ್‌ ಆಗಿತ್ತು. ನಂತರ ಐರ್ಲೆಂಡ್‌ 207 ರನ್‌ ದಾಖಲಿಸಿ 122 ರನ್‌ ಮುನ್ನಡೆ ಗಳಿಸಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್‌ 303 ರನ್‌ ಗಳಿಸಿ ಐರ್ಲೆಂಡ್‌ಗೆ 182 ರನ್‌ ಗುರಿ ನೀಡಿತ್ತು. ಗುರಿ ಹಿಂಬಾಲಿಸಿದ್ದ ಐರ್ಲೆಂಡ್‌ ಕೇವಲ 38 ರನ್‌ಗಳಿಗೆ ಕುಸಿದಿತ್ತು. ಇಂಗ್ಲೆಂಡ್‌ 143 ರನ್‌ಗಳಿಂದ ಜಯ ಸಾಧಿಸಿತ್ತು.

ಈ ಪಂದ್ಯದ ಫಲಿತಾಂಶ ನಮಗೆ ತೃಪ್ತಿ ತಂದಿಲ್ಲ. ಪಿಚ್‌ ಮೊದಲನೇ ಹಾಗೂ ಕೊನೆಯ ಇನಿಂಗ್ಸ್‌ಗಳಲ್ಲಿ ತುಂಬಾ ವ್ಯತ್ಯಾಸದಿಂದ ಕೂಡಿತ್ತು. ಟೆಸ್ಟ್‌ ಪಂದ್ಯಕ್ಕೆ ಇದು ಸೂಕ್ತವಾಗಿರಲಿಲ್ಲ. ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್‌ ಸರಣಿಗೆ ತಯಾರಿ ನಡೆಸುತ್ತಿದ್ದೇವೆ. ಈ ಪಂದ್ಯದ ಜಯ ನಮ್ಮಲ್ಲಿ ವಿಶ್ವಾಸವನ್ನು ಹಿಮ್ಮಡೆಸಿದೆ ಎಂದು ರೂಟ್‌ ಹೇಳಿಕೊಂಡಿದ್ದಾರೆ.

Leave a Comment