ಲಾರಿ ಹಾಯ್ದು ಕಾವಲುಗಾರ ಸಾವು

ವಿಜಯಪುರ ಡಿ 7: ನಗರ ಹೊರವಲಯದ ಹಿಟ್ನಳ್ಳಿ ಕೃಷಿ ಕಾಲೇಜು ಬಳಿ ಲಾರಿ ಹಾಯ್ದು ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಮನಗೂಳಿ ಗ್ರಾಮದ ಶ್ರೀಶೈಲ ಅರಬಗಿ ( 45) ಎಂಬಾತನು ಅಪಘಾತದಲ್ಲಿ ಸಾವಿಗೀಡಾಗಿದ್ದು ಆತ ರಸ್ತೆ ದಾಟುವಾಗ ಈ ಅಪಘಾತ ಸಂಭವಿಸಿದೆ.
ಮೃತ ವ್ಯಕ್ತಿ ಕೃಷಿ ಕಾಲೇಜಿನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಲಾರಿ ಚಾಲಕ ಅಪಘಾತದ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment