ಲಾರಿ – ಕಾರ್ ಡಿಕ್ಕಿ ಬ್ಯಾಂಕ್ ಮ್ಯಾನೇಜರ ಸಾವು

ಕಾರವಾರ,ಜೂ.13- ಲಾರಿ ಹಾಗೂ ಕಾರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ಸಮೀಪದ ಹಿಟ್ಟಿನ ಬೈಲ್ ಬಳಿ ಇಂದು ಸಂಭವಿಸಿದೆ.
ಸುನೀಲ ಚರಣ ಪಾಂಡೆ ಎಂಬುವವರೇ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇವರು ಹುಬ್ಬಳ್ಳಿಯ ಬರೋಡಾ ಬ್ಯಾಂಕ್ ನಲ್ಲಿ ಮ್ಯಾನೇಜರ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ  ಕಾರ್ ಚಾಲಕ ಶುಭಂ ಕಲಾಲ ಇವರಿಗೆ ಗಂಭೀರ ಗಾಯಗಳಾಗಿದ್ದು ಇವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಯಲ್ಲಾಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

Leave a Comment