ಲಾರಿಗೆ ಟಿಟಿ ಡಿಕ್ಕಿ

ತೊಕ್ಕೊಟ್ಟು ಮೂಲದ ಮೂವರು ಮೃತ್ಯು
ಮಂಗಳೂರು, ನ.೧೪- ಟೆಂಪೋ ಟ್ರಾವೆಲರ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ತೊಕ್ಕೊಟ್ಟು ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಮೈಸೂರು-ಮಂಗಳೂರು ಹೆದ್ದಾರಿಯ ಹುಣಸೂರು ತಾಲೂಕಿನ ಕೊಳಘಟ್ಟ ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಹಮೀದ್ (೪೦), ಅವರ ಮಗ ಹಕೀಬ್ ಹಾಗೂ ಹಮೀದ್ ಸಹೋದರ ಇಕ್ಬಾಲ್ (೩೪) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟು ಮೂಲದ ೧೭ ಸದಸ್ಯರ ಕುಟುಂಬವೊಂದು ಊಟಿ ಪ್ರವಾಸಕ್ಕೆಂದು ಟೆಂಪೋ ಟ್ರಾವೆಲರ್‌ನಲ್ಲಿ ನಿನ್ನೆ ಸಂಜೆ ಹೊರಟ್ಟಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ದಟ್ಟ ಮಂಜು ಕವಿದಿದ್ದರಿಂದ ಟಿಟಿ ಚಾಲಕನಿಗೆ ಮುಂದೆ ಚಲಿಸುತ್ತಿದ್ದ ಲಾರಿ ಕಾಣದೆ ನೇರವಾಗಿ ಅದರ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಮೈಸೂರು-ಹುಣಸೂರು ಸಮೀಪದ ತಲುಪಿದ ವೇಳೆ ಲಾರಿಯೊಂದು ಕುಟುಂಬ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ ಅನೇಕ ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Leave a Comment