ಲಾಭವಿಲ್ಲದ ಪಾಪ್‌ಕಾರ್ನ್ ಬಜೆಟ್-ಡಿ.ಕೆ.ಶಿ

ಬೆಂಗಳೂರು.ಫೆ.೧-ಕೇಂದ್ರದ ಬಜೆಟ್ ನಿಂದ ರೈತರಿಗೂ ಅನುಕೂಲವಿಲ್ಲ, ರಾಜಕೀಯಕ್ಕೂ ಲಾಭವಿಲ್ಲ. ಇದೊಂದು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಬಜೆಟ್ ಆಗಿದ್ದು, ರೈತರಿಗೆ ಮೋದಿ ಪಾಪ್ ಕಾರ್ನ್ ಕೊಟ್ಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ”ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಣಾಳಿಕೆಯಲ್ಲಿ ೧೦ ಸಾವಿರ ರೂಪಾಯಿ ಹಣ ನೀಡುವ ಭರವಸೆ ನೀಡುವುದಾಗಿ ಘೋಷಿಸಿದ್ದೇವೆ. ಇಡೀ ರಾಜ್ಯಕ್ಕೆ ೪೫೦೦ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ತಾವು ೮೦೦ ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು, ೧೦ ಸಾವಿರ ಕೋಟಿ ರೂ. ನೀರಾವರಿ ಇಲಾಖೆಗೆ ಮಾಡಿಕೊಡಲಾಗಿದೆ” ಎಂದು ತಿಳಿಸಿದರು.

ಪ್ರಧಾನಿ ಮೋದಿ ದೇಶದ ನಿರುದ್ಯೋಗಿಗಳಿಗೆ ಯಾವುದೇ ಉದ್ಯೋಗ ಸೃಷ್ಟಿ ಮಾಡಿಲ್ಲ. ಉದ್ಯೋಗ ಸೃಷ್ಟಿಸುವ ನಿರೀಕ್ಷೆಯನ್ನೂ ಸಹ ಸುಳ್ಳಾಗಿಸಿದ್ದಾರೆ ಎಂದು ಅವರು ಟೀಕಿಸಿದರು.

Leave a Comment