ಲಾಕ್ ಡೌನ್ ಹಸಿವು – ಓರ್ವ ಮಹಿಳೆ ಬಲಿ

ರಾಯಚೂರು.ಏ.07- ಕಳೆದ 13 ದಿನಗಳ ಲಾಕ್ ಡೌನ್‌ನಿಂದ ಊಟ ಸಿಗದೇ, ಸಿಂಧನೂರಿನ ಕೂಲಿ ಮಹಿಳೆಯೋರ್ವಳು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಕೆಲಸವಿಲ್ಲದೇ, ತುತ್ತು ಕೂಳು ದೊರೆಯದೇ, ತೀವ್ರ ಸಂಕಷ್ಟದಲ್ಲಿದ್ದ ಬೆಂಗಳೂರಿನಿಂದ ರಾಯಚೂರಿನತ್ತ ಪ್ರಯಾಣ ಬೆಳೆಸಿದ ಮಹಿಳೆ ಅನ್ನ, ನೀರಿಲ್ಲದೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ದೇಶದ ಲಾಕ್ ಡೌನ್‌ನಲ್ಲಿ ರಾಜ್ಯದಲ್ಲಿ ಸಿಂಧನೂರಿನ ಗಂಗಮ್ಮಳ ಸಾವು ಪ್ರಪ್ರಥಮ ಹಸಿವಿನಿಂದ ಸತ್ತ ಪ್ರಕರಣವನ್ನು ಕಳೆದ 13 ತಿಂಗಳ ಹಿಂದೆ ಮಂಗಮ್ಮ ಕೂಲಿ ಕೆಲಸ ಮಾಡಲು ಇಲ್ಲಿಂದ ಬೆಂಗಳೂರಿಗೆ ಗುಳೆ ಹೋಗಿದ್ದರು.
ಗ್ಲೋಬಲ್ ವಿಲೇಜ್ ಅಪಾರ್ಟಮೆಂಟ್ ನಿರ್ಮಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಘೋಷಣೆಯಾಗಿದ್ದರಿಂದ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಂಗಳೂರಿನಲ್ಲಿ ಉಳಿಯಲು ಯಾವುದೇ ಸೌಕರ್ಯ ದೊರೊಯದ ಕಾರಣ ಸಿಂಧನೂರಿಗೆ ಮರಳಲು ತೀರ್ಮಾನಿಸಿ, ಪ್ರಯಾಣ ಬೆಳೆಸಿದ್ದರು. ನಿರಂತರ ಊಟ ದೊರೆಯದೇ, ಮಹಿಳೆಯೂ ಕೊನೆಗೂ ಕೊನೆಯುಸಿರೆಳೆದಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಮ್ಮಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಮೃತಪಟ್ಟಿದ್ದಾಳೆ.

Leave a Comment