ಲಾಕ್ ಡೌನ್ ಸರಳ ವಿವಾಹಕ್ಕೆ ನಾಂದಿ

ಬಳ್ಳಾರಿ, ಮೇ.24: ಗಣಿನಾಡಿನಲ್ಲಿ ಬಹುತೇಖರ ಮದುವೆಗಳು ವೈಭವೋಪಿತವಾಗಿಯೇ ನಡೆಯುತ್ತಿವೆ. ಆದರೆ ಈ ಬಾರಿಯ ಬೇಸಿಗೆ ಅವಧಿಯಲ್ಲಿ ನಡೆದ ಮದುವೆಗಳು ಅತೀ ಸರಳವಾಗಿಯೇ ನಡೆದವು. ಕಾರಣ ಕೊರೊನಾದಿಂದ ವಿಧಿಸಿದ್ದ ಲಾಕ್ ಡೌನ್.

ಈಗಾಗಲೇ 4 ಹಂತದ ಲಾಕ್ ಡೌನ್ ನಡೆದಿದೆ. ಈ ವೇಳೆಗೆ ನಗರದಲ್ಲಿ ನೂರಾರು ಮದುವೆಗಳು ನಡೆದಿವೆ. ಎಲ್ಲವೂ ಸದ್ದು ಗದ್ದಲವಿಲ್ಲದಂತೆ ಅವರವರ ಮನೆ ಮುಂದೆ ನಡೆದವು.
ಇಂದು ನಗರದ ಗ್ರಾನೈಟ್ ಉದ್ಯಮಿ ಸೂರ್ಯನಾರಾಯಣರೆಡ್ಡಿ ಅವರ ಪುತ್ರ ಜಿಲ್ಲಾ ಪಂಚಾಯ್ತಿ ಸದಸ್ಯ ನಾರಾಭರತ್ ರೆಡ್ಡಿ ವಿವಾಹವೂ ಸಹ ಹೊಸಪೇಟೆಯಲ್ಲಿ ಕೆಲವೇ ಜನ ಸಮೂಹದ ನಡುವೆ ಹೆಚ್ಚು ಜನರಿಲ್ಲದೆ ನಡೆಯಿತು.

ಅದರಂತೆ ನಗರದ ಅನೇಕ ಕಡೆ ಈ ಅವಧಿಯ ಉತ್ತಮವಾದ ಕೊನೆ ಮುಹೂರ್ತ ಎಂದು ವಿವಾಹ ನಡೆದವು. ಇಂದು ಸಂಡೆ ಲಾಕ್ ಡೌನ್ ಎಂದು ಕರೆ ನೀಡಿದ್ದರೂ ವಿವಾಹಗಳಿಗೆ ವಿನಾಯ್ತಿ ನೀಡಿತ್ತು.
ಇದರ ಮಧ್ಯೆಯೇ ಇಲ್ಲಿನ ಬಾಪೂಜಿ ನಗರದಲ್ಲಿ ಅಮರನಾಥ್ ಮತ್ತು ಲಲಿತ ಅವರ ವಿವಾಹ ಸರಳವಾಗಿ ಸರ್ಕಾರದ ನಿಯಮಗಳ ಪಾಲಿಸಿ ನಡೆಸಲಾಯಿತು.
ಒಟ್ಟಾರೆ ಈ ಬಾರಿ ಬೇಸಿಗೆ ಅವಧಿಯಲ್ಲಿನ ವಿವಾಹಗಳು ಕೊರೊನಾ ಸಂಕಷ್ಟ, ಲಾಕ್ ಡೌನ್ ನಿಂದ ಕಲ್ಯಾಣ ಮಂಟಪ, ದೇವಸ್ಥಾನಗಳು, ಶಾಮಿಯಾನದವರಿಗೆ ಗಿರಾಕಿ ಇಲ್ಲದೆ ಸರಳ ವಿವಾಹಕ್ಕೆ ಕಾರಣವಾಯಿತು.

Share

Leave a Comment