ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ; ಸಂಸದೀಯ ಸಮಿತಿಗಳ ಸಭೆ ತಯಾರಿ ಪರಿಶೀಲಿಸಿದ ನಾಯ್ಡು

ನವದೆಹಲಿ, ಮೇ 25-ಲಾಕ್ ಡೌನ್ 4.0 ಸಡಿಲಿಕೆ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಇಲಾಖೆಗಳ ಆಧಾರಿತ ಸಂಸದೀಯ ಸ್ಥಾಯಿ ಸಮಿತಿಗಳ ನಿಯಮಿತ ಸಭೆಗಳ ತಯಾರಿಗಳನ್ನು ಪರಿಶೀಲಿಸಿದರು.
ಓಂ ಬಿಲರ್ಆ ಅವರು ಉಪರಾಷ್ಟ್ರಪತಿ ಭವನದಲ್ಲಿ ನಾಯ್ಡು ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಸಮಿತಿಗಳಲ್ಲಿ 21 ಲೋಕಸಬಾ ಹಾಗೂ 10 ರಾಜ್ಯ ಸಭಾ ಸದಸ್ಯರು ಸೇರಿ ಒಟ್ಟು 31 ಸಂಸರಿದ್ದಾರೆ.
ಈ ಸಮಿತಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಸದಸ್ಯರ ಸಂಖ್ಯೆಯನ್ನು ಆದಷ್ಟು ಕಡಿಮೆಯಿರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆ ನಡೆಸುವ ಕೊಠಡಿಗಳ ಲಭ್ಯತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ನಾಯ್ಡು ಹಾಗೂ ಬಿರ್ಲಾ ವಿಸ್ತೃತ ಚರ್ಚೆ ನಡೆಸಿದರು. ಈಗಾಗಲೇ ಸಂಸತ್ತಿನಲ್ಲಿ ಇದಕ್ಕಾಗಿ 9 ಕೋಣೆಗಳನ್ನು ಗುರುತಿಸಲಾಗಿದ್ದು, ಇತರ ಸಮಿತಿಗಳಿಗಾಗಿ ಆರು ಹೆಚ್ಚಿನ ಕೊಠಡಿಗಳನ್ನು ಗುರುತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರತಿ ಕೊಠಡಿಯಲ್ಲೂ ಮೈಕ್ರೋಫೋನ್ ವ್ಯವಸ್ಥೆಯೊಂದಿಗೆ ಮಾರ್ಗಸೂಚಿ ಅನುಸಾರ ಆಸನದ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

Share

Leave a Comment