ಲವ್ ಮಾಕ್ಟೇಲ್ -2 : ಸ್ಕ್ರಿಪ್ಟ್​ ಪೂಜೆ ನೆರವೇರಿಸಿದ ಡಾರ್ಲಿಂಗ್ ಕೃಷ್ಣ, ಮಿಲನಾ

ಬೆಂಗಳೂರು, ಜೂ.17-ಲವ್ ಮಾಕ್ಟೇಲ್- 2 ಸ್ಕ್ರಿಪ್ಟ್ ಬರೆಯುವ ಕಾರ್ಯ ಪರಿಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ಕ್ರಿಪ್ಟ್ ಪೂಜೆಯನ್ನು ಬುಧವಾರ ಬೆಳಿಗ್ಗೆ ಗಂಗಾ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನೆರವೇರಿಸಿದ್ದಾರೆ.

ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಅಭಿನಯದ ಲವ್ ಮಾಕ್ಟೇಲ್ ಚಿತ್ರ ಜನವರಿ 31 ರಂದು ತೆರೆಕಂಡಿತು.

ಲವ್ ಮಾಕ್ಟೇಲ್ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಾಗ ಅಷ್ಟಾಗಿ ಹವಾ ಮಾಡಲಿಲ್ಲ. ಆದರೆ, ಕೊರೊನಾ ಲಾಕ್ಡೌನ್ ಸಮಯದಲ್ಲಿ OTT ಪ್ಲಾಟ್ಫಾರಮ್ನಲ್ಲಿ ಚಿತ್ರ ತರೆಕಂಡ‌ ನಂತರ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು.

ಇದೀಗ ಲವ್ ಮಾಕ್ಟೇಲ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮುಂಬರುವ ಚಿತ್ರಗಳ ಬಗ್ಗೆ ಪ್ರೇಕ್ಷಕರ ಕಣ್ಣು ನೆಟ್ಟಿತ್ತು.

ಇದಕ್ಕೆ ಪ್ರತ್ಯೂತ್ತರ ಎಂಬಂತೆ ಲವ್ ಮಾಕ್ಟೇಲ್‌ ಚಿತ್ರದ ಮುಂದುವರೆದ ಭಾಗ ಆರಂಭಿಸಿರುವುದಾಗಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಡಾರ್ಲಿಂಗ್ ಕೃಷ್ಣ ಹೇಳಿದ್ದರು. ಇದೀಗ ಕಥೆ ಬರೆಯುವ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲಾಗಿದೆ.

ಸದ್ಯ ಹೊಸ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡದಿರುವುದರಿಂದ ಚಿತ್ರೀಕರಣ ಆರಂಭಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಶೂಟಿಂಗ್ ಆರಂಭಿಸಲು ರಾಜ್ಯ ಸರ್ಕಾರದ ಹಸಿರು ನಿಶಾನೆಗೆ ಕಾಯುತ್ತಿದೆ ಚಿತ್ರತಂಡ

Share

Leave a Comment