ಲವ್‍ ಮಾಕ್‍ಟೇಲ್‍’ ತಂಡಕ್ಕೆ ಕಿಚ್ಚನ ಹಾರೈಕೆ

ಬೆಂಗಳೂರು, ಜ 18 – ರೊಮ್ಯಾಂಟಿಕ್ ಕಾಮಿಡಿ ಎಂಟರ್‍ಟೈನ್ ಮೆಂಟ್ ಚಿತ್ರ ‘ಲವ್ ಮಾಕ್‍ಟೇಲ್’ ತೆರೆಗೆ ಬರಲು ಸಿದ್ಧವಾಗಿದೆ  ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ

ನಿರ್ದೇಶನದೊಂದಿಗೆ ನಿರ್ಮಾಣವನ್ನೂ ಮಾಡಿರುವ ಮದರಂಗಿ ಕೃಷ್ಣ ಅವರಿಗೆ ಮಿಲನ ನಾಗರಾಜ್ ಕೈ ಜೋಡಿಸಿದ್ದು, ಬಂಡವಾಳ ಹೂಡಿದ್ದಾರೆ

ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ಕೂಡ ಇದೆ ನಾಯಕನ ಬದುಕಿನಲ್ಲಿ ಮೂರು ಹಂತಗಳು  ಬರಲಿದ್ದು, ಒಂದೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆ  ಕಥೆ ಮೂಲಕ ನಾಯಕನ ಲೈಫ್ ಕೂಡ ಬದಲಾಗುತ್ತಾ ಹೋಗುತ್ತದೆ ಎಂದು ನಿರ್ದೇಶಕ ಮದರಂಗಿ ಕೃಷ್ಣ ತಿಳಿಸಿದ್ದಾರೆ

ಚಿತ್ರ ವಿತರಣೆಯ ಜವಾಬ್ದಾರಿಯನ್ನು ಜಾಕ್‌ಮಂಜು ವಹಿಸಿಕೊಂಡಿದ್ದು, ಜನವರಿ ಅಂತ್ಯದಲ್ಲಿ  ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ  100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ “ಲವ್‌  ಮಾಕ್ಟೇಲ್‌’ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು.

 ಚಿತ್ರಕ್ಕೆ ಯು/ಎ  ಸರ್ಟಿ ಪಿಕೆಟ್‌ ಸಿಕ್ಕಿದ್ದು, ಚಿತ್ರದಲ್ಲಿ ಮಿಲನ ನಾಗರಾಜ್‌, ಅಮೃತಾ ಅಯ್ಯಂಗಾರ್‌,  ರಚನಾ ನಾಯಕಿಯರು. ಉಳಿದಂತೆ ಅಭಿ ಇತರರು ನಟಿಸಿದ್ದಾರೆ  ಸಾಮಾಜಿಕ ಜಾಲತಾಣಗಳಲ್ಲಿ  ಟ್ರೇಲರ್  ಸದ್ದುಮಾಡುತ್ತಿರುವುದು ತುಂಬಾ ಸಂತಸ ತಂದುಕೊಟ್ಟಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Leave a Comment