ಲವ್,ಸೆಕ್ಸ್, ದೋಖಾ ಆರೋಪಿ ಬಂಧನ

ಬೆಂಗಳೂರು,ಆ,೪-ಮದುವೆಯಾಗುವುದಾಗಿ ನಂಬಿಸಿ ಪ್ರಿಯತಮೆಯ ಸಾವಿಗೆ ಕಾರಣನಾಗಿದ್ದ ಪ್ರಿಯಕರನ್ನು ಚಂದ್ರ ಲೇಔಟ್ ಪೊಲೀಸರು ವಶಕ್ಕೆ ಪಡೆಸಿದ್ದಾರೆ.
ಲವ್, ಸೆಕ್ಸ್ ಬಳಿಕ ದೋಖಾ ಮಾಡಿzದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದರು> ಈ ಪ್ರಕರಣಕ್ಕೆ ಸಂಬಂಧಿಸಿದಂತೆಹೊಯ್ಸಳ ನಗರ ನಿವಾಸಿ ರವಿಕಿರಣ್ ಬಂಧಿತ ಆರೋಪಿ. ಕುಣಗಲ್ ರಸ್ತೆ ಬಳಿ ಆರೋಪಿಯನ್ನ ಚಂದ್ರಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜುಳಾ ಎಂಬಾಕೆ ನಿನ್ನೆ, ಪ್ರಿಯಕರ ರವಿಕಿರಣ್ ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಡೆತ್‌ನೊಟ್ ಬರೆದು ಭೈರವೇಶ್ವರನಗರದ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಳು.
ಹಿನ್ನೆಲೆ: ಮೃತ ಮಂಜುಳಾ ಮಾಗಡಿ ತಾಲೂಕಿನ ದೊರೆಸ್ವಾಮಿಪಾಳ್ಯದವರು. ರಾಜರಾಜೇಶ್ವರಿ ನಗರದ ರಿಲೆಯನ್ಸ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು, ಭೈರವೇಶ್ವರ ನಗರದಲ್ಲಿರುವ ತಮ್ಮ ಚಿಕ್ಕಮ್ಮ ಮನೆಯಲ್ಲಿ ನೆಲೆಸಿದ್ದರು. ಈ ನಡುವೆ ರವಿಕಿರಣ್ ಎಂಬುವನ ಜತೆ ಲವ್‌ನಲ್ಲಿ ಬಿದ್ದಿದ್ದರು.
ಈ ಪ್ರೇಮದ ಸಲುಗೆಯಲ್ಲಿ ಮದುವೆ ಆಗುವುದಾಗಿ ನಂಬಿಸಿ ಮಂಜುಳಾ ಜತೆ ರವಿಕಿರಣ್ ದೇಹ ಸಂಪರ್ಕ ನಡೆಸಿದ್ದ ಎನ್ನಲಾಗಿದ್ದು. ಬಳಿಕ ಆಕೆಯಿಂದ ದೂರಾಗಲು ಆತ ಯತ್ನಿಸಿದ್ದನು.
ತನ್ನಿಂದ ದೂರವಾಗಲು ಯತ್ನಿಸುತ್ತಿದ್ದ ಪ್ರಿಯಕರನ ಮೇಲೆ ಬೇಸರಗೊಂಡಿದ್ದ ಮಂಜುಳಾ ಚಂದ್ರಾಲೇಔಟ್ ಠಾಣೆಯಲ್ಲಿ ರವಿಕಿರಣ್ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಆರೋಪದಡಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ರವಿಕಿರಣ್‌ನನ್ನ ಚಂದ್ರಲೇಔಟ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Leave a Comment