ಲಯನ್ ಸಂಸ್ಥೆಯಿಂದ ಪರಿಸರ ರಕ್ಷಣೆ

ಬೆಂಗಳೂರು, ಆ.೧- ಪರಿಸರ ಸಂರಕ್ಷಣೆ ಆಗಬೇಕಾದರೆ ಪ್ರತಿ ಒಬ್ಬ ನಾಗರೀಕನು ಒಂದೊಂದು ಸಹಿ ನೆಟ್ಟು ಮನುಷ್ಯರ ಉಸಿರು ಉಳಿಸುವ ಕೆಲಸ ಆಗಬೇಕಾಗಿದೆ. ಈಗಾಗಲೇ ಲಯನ್ ಸಂಸ್ಥೆಯಿಂದ ಯಲಹಂಕದಿಂದ ಗೌರಿಬಿದನೂರು ವರೆಗೆ ರೈಲ್ವೇ ಟ್ರಾಕ್ ಪಕ್ಕದಲ್ಲಿ ಹತ್ತು ಸಾವಿರ ಸಸಿ ನೆಡುವ ಕೆಲಸ ಪ್ರಾರಂಭವಾಗಿದೆ. ಮುಂದೆ ಇಪ್ಪತ್ತೈದು ಸಾವಿರ ಸಸಿ ನೆಡುವ ಯೋಜನೆ ಇದೆ ಎಂದು ಅಂತರಾಷ್ಟ್ರೀಯ ಲಯನ್ ನಿರ್ದೇಶಕ ವಿಜಯ್ ಕುಮಾರ್ ರಾಜು ತಿಳಿಸಿದರು.

ಬೆಂಗಳೂರಿನಲ್ಲಿ ಲಯನ್ ಜಿಲ್ಲಾ 317 ಎಫ್ ನ 2018-19ನೇ ಸಾಲಿನ ಕ್ಯಾಬಿನೇಟ್ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ರಾಷ್ಟ್ರಮಟ್ಟದಲ್ಲಿ ಲಯನ್ ಸಂಸ್ಥೆ ಬೃಹತ್ ಸಂಸ್ಥೆಯಾಗಿದ್ದು 254 ರಾಷ್ಟ್ರಗಳಲ್ಲಿ ಉತ್ತಮ ಸೇವೆ ಮಾಡುತ್ತಿದೆ. ಇದೇ ರೀತಿ ಜಿಲ್ಲಾ 317 ಎಫ್ ರಾಜ್ಯಪಾಲರಾದ ಸತ್ಯನಾರಾಯಣ ರಾಜು ಹಾಗೂ ತಂಡದವರು ಉತ್ತಮ ಸೇವಾ ಕಾರ್ಯ ಮಾಡುತ್ತಿದ್ದು, ಈ ದಿನ 60ಲಕ್ಷಕ್ಕೂ ಸೇವಾ ಕಾರ್ಯ ನಡೆಸಿದರು ಎಂದು ತಮ್ಮ ಸಂತಸ ವ್ಯಕ್ತ ಪಡಿಸಿದರು.

ಇದೇ ವೇಳೆ ರಾಜಾನುಕುಂಟೆಯಲ್ಲಿ ಮಧುಮೇಹ ಮತ್ತು ಬಾಲ್ಯದ ಅರ್ಭುದ ರೋಗ (ಕ್ಯಾನ್ಸರ್) ಕೊಠ‌ಡಿ ಅಪಘಾತದಲ್ಲಿ ತುತ್ತಾಗಿದ್ದ ಹೇಮಂತ್ ಎಂಬುವರ ಚಿಕಿತ್ಸೆಗೆ 1 ಲಕ್ಷ ಹಾಗೂ ಪ್ರತಿ ವಿದ್ಯಾರ್ಥಿಗೆ 10 ಸಾವಿರ ರೂ ಗಳಂತೆ 60 ವಿದ್ಯಾರ್ಥಿಗಳಿಗೆ ವೇತನ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಲಯನ್ ಗಣ್ಯರಾದ ವಿ.ವಿ.ಕೃಷ್ಣಾ ರೆಡ್ಡಿ, ಕೆ.ವಂಶಿಧರ್ ಬಾಬು, ಶ್ರೀನಿವಾಸನ್, ಹೆಚ್.ಕೆ.ಗಿರಿಧರ್, ಉಪ ರಾಜ್ಯಪಾಲರಾದ ಎಸ್.ರವೀಂದ್ರ, ದೀಪಕ್ ಸುಮನ್, ಯುದಿಶ್ರ ಮುಂತಾದವರು ವೇದಿಕೆಯಲ್ಲಿದ್ದರು.

Leave a Comment