ಲಟ್ಟ ಲೀವ್ ಮಳಿಗೆಗೆ ಶಾಸಕ ಉದಯ್ ಗರುಡಾಚಾರ್ ಚಾಲನೆ

ಬೆಂಗಳೂರು. ಆ ೨೫- ನಗರದ ಗರುಡಾ ಮಾಲ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಲಟ್ಟ ಲಿವ್ ಮಳಿಗೆಗೆ ಶಾಸಕ ಉದಯ್ ಗರುಡಾಚಾರ್ ಚಾಲನೆ ನೀಡಿದರು.
ಜೀವನ ಶೈಲಿಗೆ ಅನುಗುಣವಾದ ಎಲ್ಲಾ ಪರಿಕರಗಳು ಒಂದೇ ಮಳಿಗೆಯಲ್ಲಿ ಲಭ್ಯವಿರುವ ಮಳಿಗೆ ನಗರದ ಗರುಡಾ ಮಾಲ್ ನಲ್ಲಿ ತಲೆ ಎತ್ತಿದೆ. ಆಧುನಿಕ ಮತ್ತು ಪಾಶ್ ಜೀವನ ಶೈಲಿಗೆ ಒಪ್ಪುವ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುವುದು ಈ ಮಳಿಗೆಯ ವಿಶೇಷತೆಯಾಗಿದೆ. ಮುಂಬೈ ಮೂಲದ ಅರಿಹಂತ್ ಚಿಲ್ಲರೆ ಮಾರಾಟ ಕಂಪೆನಿ ತನ್ನ ಸಹಯೋಗದಲ್ಲಿ ಜಾಗತಿಕ ಲಟ್ಟ ಲಿವ್ ಮಳಿಗೆಯನ್ನು ತೆರೆದಿದೆ.
ಲಟ್ಟ ಲಿವ್ ಕಂಪೆನಿ ಜಗತ್ತಿನಾದ್ಯಂತ ೫೦೦ ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಭಾರತದಲ್ಲಿ ಮುಂದಿನ ಮೂರು ತಿಂಗಳಲ್ಲಿ ಇಂತಹ ೧೦ ಮಳಿಗೆಗಳನ್ನು ತೆರೆಯಲು ತೀರ್ಮಾನಿಸಿದೆ.
ಲಟ್ಟ ಲಿವ್ ಗುಣಮಟ್ಟದ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದು, ಕುಟುಂಬಕ್ಕೆ ಅಗತ್ಯವಾಗಿರುವ ಎಲ್ಲಾ ವಸ್ತುಗಳು ಇಲ್ಲಿ ದೊರೆಯುತ್ತವೆ. ಈ ಸಂದರ್ಭದಲ್ಲಿ ಅರಿಹಂತ್ ಸಂಸ್ಥೆಯ ಪಾಲುದಾರರಾದ ಮಯೂರಾಂಕ, ಅನಿಲ್ ಸಿರೋಯಾ, ಅಮನ್ ಜೈನ್, ಅನಿಲ್ ಕುಮಾರ್ ರಾಥೋರ್ ಉಪಸ್ಥಿತರಿದ್ದರು.

Leave a Comment