ಲಕ್ಷ್ಮೇಶ್ವರ ಪುರಸಭೆ ಬಿಜೆಪಿಗೆ ಅಧಿಕಾರ-ಶಾಸಕ ಲಮಾಣಿ

ಲಕ್ಷ್ಮೇಶ್ವರ,ಸೆ9-ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಪಟ್ಟಣದ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಪುರಸಭೆಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಬಿ.ಜೆ.ಪಿ ಮತ್ತು ಪಕ್ಷೇತರ ಸದಸ್ಯರನ್ನು ಸನ್ಮಾನಿಸಿ ಮಾತನಾಡಿ ಈ ಭಾರಿ ಯಾವುದೇ ಸಂದರ್ಭದಲ್ಲೂ ಪುರಸಭೆಯಲ್ಲಿ ಸಂಪೂರ್ಣವಾಗಿ ಬಿ.ಜೆ.ಪಿ ಅಧಿಕಾರದ ಚುಕ್ಕಾಣೆ ಹಿಡಿಯುವಲ್ಲಿ ಯಾವುದೇ ಸಂದೇಹವಿಲ್ಲ. ಸ್ಥಳಿಯ ಆಡಳಿತಕ್ಕೆ ಸರಕಾರದಿಂದ ಬೇಕಾದ ಎಲ್ಲ ರೀತಿಯ ಅನುದಾನವನ್ನು ತರುವದಾಗಿ ಹೇಳಿದರು.
ನಂತರ ಮಾತನಾಡಿದ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಅವರು ಪುರಸಭೆಯಲ್ಲಿ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ.ಬಿ.ಜೆ.ಪಿ ಸ್ಪಷ್ಟವಾಗಿ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ. ಬಿ.ಜೆಪಿಯ 7 ಸದಸ್ಯರು, ಪಕ್ಷೇತರ 4 ಸದಸ್ಯರು, ಸಂಸದರು ಮತ್ತು  ಶಾಸಕರ ಸೇರಿ ಒಟ್ಟು 13 ಸಂಖ್ಯಾಭಲವಾಗಿದ್ದು ಬಹುಮತ ಬಿ.ಜೆ.ಪಿಗೆ ಬರುವದರಿಂದ ಪುರಸಭೆ ಆಡಳಿತವನ್ನು ಬಿ.ಜೆ.ಪಿ ಮಾಡಲಿದೆ ಎಂದರಲ್ಲದೇ ಮುಂಬರುವ ಲೋಕಸಭಾ ಚುನಾವಣೆಯ ಬಿ.ಜೆ.ಪಿ ಗೆಲುವಿಗಾಗಿ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ವೈ.ಎಫ್.ಹಂಜಿ, ಕಬೇರಪ್ಪ ಮಹಾಂತಶೆಟ್ಟರ, ವಿ.ಎಲ್.ಪೂಜಾರ, ಚಂಬಣ್ಣ ಬಾಳಿಕಾಯಿ, ಎಂ.ಆರ್.ಪಾಟೀಲ, ನೀಲಪ್ಪ ಹತ್ತಿ, ಡಿ.ವೈ.ಹುನಗುಂದ, ಪೂರ್ಣಾಜಿ ಕರಾಟೆ, ಮಹೇಶ ಹೊಗೆಸೊಪ್ಪಿನ, ದುಂಡೇಶ ಕೊಟಗಿ, ವಿಜಯ ಹತ್ತಿಕಾಳ, ಸೋಮಣ್ಣ ಉಪನಾಳ, ಅನಿಲ ಮುಳಗುಂದ, ಶಿದ್ದನಗೌಡ ಬೊಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ ಸೇರಿದಂತೆ ಅನೇಕರು ಇದ್ದರು.   ಗಂಗಾಧರ ಮೆಣಸಿನಕಾಯಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment