ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ, ಪಿಸ್ತೂಲ್ ಜಪ್ತಿ

 

ಕಲಬುರಗಿ,ಮೇ.24-ನಗರದ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ನಿಂತಿದ್ದ ಮಹೀಂದ್ರ ಸ್ಕಾರ್ಪಿಯೋ ಕಾರು ಜಪ್ತಿ ಮಾಡಿರುವ ಅಬಕಾರಿ ಇಲಾಖೆಯ ಕಲಬುರಗಿ ವಲಯ-1ರ ಅಧಿಕಾರಿಗಳು ಕಾರಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ.

ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದ ದಯಾನಂದ ಸಾಹು ಎಂಬಾತನನ್ನು ಬಂಧಿಸಿ 17.280 ಲೀಟರ್ ಮದ್ಯ, 70.200 ಲೀಟರ್ ಬಿಯರ್ ಹಾಗೂ 0.32 ಎಂಎಂ ಪಿಸ್ತೂಲ್ ಮತ್ತು 10 ಜೀವಂತ ಗುಂಡು ವಶಪಡಿಸಿಕೊಂಡಿದ್ದಾರೆ.

ಮದ್ಯ ಹಾಗೂ ವಾಹನದ ಒಟ್ಟು ಮೌಲ್ಯ 5,34,688 ರೂ.ಗಳಾಗಿದ್ದು, ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದಕಣ್ಣ, ಅಬಕಾರಿ ರಕ್ಷಕರಾದ ಶಿವಪ್ಪಗೌಡ, ಮೋಹನ್, ವಸಂತ ಹಾಗೂ ಸಿಬ್ಬಂದಿಗಳಾದ ರಾಜೇಂದ್ರ, ರಾಮೇಶ್ವರ, ಅರವಿಂದ ಗೌರೆ, ಅಬಕಾರಿ ವಾಹನ ಚಾಲಕ ವೆಂಕಟೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share

Leave a Comment