ರ್‍ಯಾಂಬೋ-೨ ಕಾಮಿಡಿಗೆ ಕೊರತೆ ಇಲ್ಲ

ರ್‍ಯಾಂಬೋ-೨ ಪ್ರಯಾಣದ ಸಿನಿಮಾವಾಗಿರುವುದರಿಂದ ಡೈಲಾಗ್ ಕಡಿಮೆ. ಹಾಗಂತ ಹಾಸ್ಯಕ್ಕೆ ಕೊರತೆ ಇಲ್ಲ. ಜೀವನ ಏನು?ಎನ್ನುವುದನ್ನು ತಿಳಿಯಲು ಲಾಂಗ್ ಡ್ರೈವ್ ಹೋಗುವ  ಕಥೆ ಇದೆ. ಈ ಸಂದರ್ಭದಲ್ಲಿ  ನಾನು ಸೇರಿದಂತೆ, ಚಿಕ್ಕಣ್ಣ, ಆಶಿಕಾ ಜೊತೆಗೆ ಕಾರು ಹೀಗೆ ನಾಲ್ಕು ಪಾತ್ರಗಳು ಮುಖ್ಯವಾಗಿ ಬರುತ್ತದೆ. ಈ ಪ್ರಯಾಣದಲ್ಲಿ ಹತ್ತಿರ ಇರುವವರು ದೂರ ಆಗುತ್ತಾರೆ.  ದೂರದಲ್ಲಿರುವವರು ಹತ್ತಿರಕ್ಕೆ ಬರುವುದನ್ನು ಕಾಮಿಡಿ, ಥ್ರಿಲ್ಲರ್, ಸೆಸ್ಪನ್ಸ್‌ನಲ್ಲಿ ತರಲಾಗಿದೆ ಎಂದ ಶರಣ್ ಆ ದಿನ (ಫೆ. ೬) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು.

ಸಾಮಾನ್ಯವಾಗಿ  ಹುಟ್ಟುದಿನದಂದು ದೇವಾಲಯಗಳಿಗೆ ಪ್ರಯಾಣಿಸುವ ಶರಣ್‌ನ ಚಿತ್ರತಂಡ ಈ ಬಾರಿ ಬೆಂಗಳೂರಿನಲ್ಲಿ ಕಟ್ಟಿಹಾಕಿತ್ತು.    ಚಿತ್ರವನ್ನು ಬಿಡುಗಡೆಗೆ ಸಿದ್ಧ ಮಾಡಿಕೊಂಡೇ ಚಿತ್ರತಂಡ ಶರಣ್ ಹುಟ್ಟುಹಬ್ಬದ ದಿನವೇ ಮೊದಲ ಪ್ರಚಾರಕ್ಕೆ ಇಳಿದು ಹಾಡೊಂದನ್ನು ಬಿಡುಗಡೆಮಾಡಿ ಅವರಿಗೆ ಉಡುಗೊರೆಯಾಗಿ ನೀಡಿತು. ಶರಣ್ ಕೇಕ್ ಕತ್ತರಿಸಿ, ರ್‍ಯಾಂಬೋ-೧ ಮಾಡಿದಾಗ ರ್‍ಯಾಂಬೋ-೨ ಮಾಡುವ ಯೋಚನೆಯೇ ಇರಲಿಲ್ಲ. ಈ ಚಿತ್ರವನ್ನು ರ್‍ಯಾಂಬೋ-೧ ನೋಡದೆ ಇದ್ದ ಪ್ರೇಕ್ಷಕರು ನೋಡಿದರೂ ಪ್ರತ್ಯೇಕ ಸಿನೆಮಾವಾಗಿ ರಂಜಿಸುತ್ತದೆ ಎಂದು ಖುಷಿಯನ್ನು ಹಂಚಿಕೊಂಡರು.

ನಾಗೇಂದ್ರ ಅವರು ಪ್ರಮುಖ ನಿರ್ಮಾಪಕರಾಗಿದ್ದು, ಚಿತ್ರತಂಡದ ಬಹುತೇಕರು ಸಂಭಾವನೆ ಪಡೆಯದೆ ಕೆಲಸವನ್ನೇ ಬಂಡವಾಳವಾಗಿ ಹೊಡಿ ಕೆಲಸ ಮಾಡಿದ್ದಾರೆ. ಶರಣ್, ನಮ್ಮ ಈ ಚಿತ್ರತಂಡ ಒಂದೆರಡು ವರ್ಷಕ್ಕೆ ಒಂದು ಸಿನೆಮಾವನ್ನು ಖಂಡಿತಾ ಮಾಡುತ್ತೇವೆ ಎಂದು ಹೇಳಿಕೊಂಡರು.

ನಿರ್ದೇಶಕ ಅನಿಲ್‌ಕುಮಾರ್, ಕತೆಯಲ್ಲಿ ಎರಡು ಕಾರುಗಳು ಪಾತ್ರವಾಗಿ ಬರುತ್ತವೆ. ಪ್ರಯಾಣದಲ್ಲಿ ಸಿನೆಮಾ ಕಥೆಯ  ಸನ್ನಿವೇಶಗಳು ನಡೆಯುವುದರಿಂದ ಶ್ರೀಲಂಕಾದಿಂದ ಪಾಕಿಸ್ತಾನ ಗಡಿಭಾಗದವರೆಗೆ ಚಿತ್ರೀಕರಿಸಲಾಗಿದೆ. ರ್‍ಯಾಂಬೋ-೨ ಚಿತ್ರದಿಂದ ನನ್ನ ಸಿನೆಮಾ ಮಾಡುವ ಕನಸು  ಈಡೇರಿದೆ ಎಂದರೆ, ಚಿತ್ರಕ್ಕೆ ಸೂತ್ರಧಾರ ಆಗಿರುವ ತರುಣ್‌ಸುಧೀರ್ ಮಾತನಾಡಿ ಇದು ತಂತ್ರಜ್ಞರ ಸಿನೆಮಾ ಎನ್ನಬಹುದು ಎಂದರು.

ಚಿಕ್ಕಣ್ಣ, ಶರಣ್ ಜೊತೆ ಹಿಂದಿನ ಚಿತ್ರಗಳಲ್ಲಿ ಹಳ್ಳಿ ಹುಡುಗನಾಗಿ ನಟಿಸಿದ್ದು, ಇದರಲ್ಲಿ ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ  ಕಾಣಿಸಿಕೊಂಡಿದ್ದೇನೆ. ಹನಿಹನಿಗೂಡಿದರೆ ಹಳ್ಳ ಎನ್ನುವ ಹಾಗೆ ಎಲ್ಲಾ ನದಿಗಳು ಸೇರಿ ಸಮುದ್ರವಾಗುವಂತೆ ಈ ಚಿತ್ರತಂಡದ
ಜೊತೆ ನಾನು ಭಾಗಿಯಾಗಿರುವುದು ಖುಷಿಯಾಗಿದೆ ಎಂದರು.  ನಾಯಕಿ ಆಶಿಕಾರಂಗನಾಥ್.

Leave a Comment