ರೌಡಿ ಪರೇಡ್ ನಡೆಸಿದ ದಾವಣಗೆರೆ ಎಸ್‍ಪಿ

ದಾವಣಗೆರೆ.ಆ.27; ಗೌರಿ ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಇಂದು ಬೆಳಗ್ಗೆ ರೌಡಿಗಳ ಪರೇಡ್ ನಡೆಸಿದರು.
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಹಬ್ಬಗಳ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ರೌಡಿಗಳ ಪರೇಡ್ ನಡೆಸಲಾಗಿದೆ. ಈ ವೇಳೆ ಜಿಲ್ಲಾಪೋಲಿಸ್ ವರಿಷಾಧಿಕಾರಿ ಹನುಮಂತರಾಯ ಸುದ್ದಿಗಾರರೊಂದಿಗೆ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ರಮವಹಿಸಲಾಗುತ್ತಿದೆ. ನಗರದ ಉಪವಿಭಾಗವ್ಯಾಪ್ತಿಯ ಗ್ರಾಮೀಣ ಹಾಗೂ ಹರಿಹರ ಸೇರಿದಂತೆ 10 ಠಾಣೆಗಳಲ್ಲಿ 697 ಮಂದಿ ರೌಡಿಗಳಿದ್ದಾರೆ.ಇವರಲ್ಲಿ ಇಂದು 283 ಗೌಡಿಗಳ ಪರೇಡ್ ಮಾಡಿಸಲಾಗಿದೆ. ಪರೇಡ್ ಗೆ ಇಂದು ಗೈರು ಹಾಜರಾದವರನ್ನು ಮತ್ತೊಮ್ಮೆ ಕರೆಸಲಾಗುವುದು. ರೌಡಿಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ.ಅವರು ಯಾವ ವೃತ್ತಿ ಮಾಡುತ್ತಿದ್ದಾರೆ ಅದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸೂಕ್ತ ರೀತಿಯಲ್ಲಿ ಎಚ್ಚರಿಕೆ ನೀಡಲಾಗುವುದು.ಒಂದುವೇಳೆ ಅವರು ಸಮಾಜಕ್ಕೆ ಧಕ್ಕೆ ಬರುವ ರೀತಿಯಲ್ಲಿ,ಸಾರ್ವಜನಿಕರಿಗೆ ತೊಂದರೆ ನೀಡುವುದು ಕಂಡುಬಂದರೆ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳ ಬೇಕೆಂದು ಎಚ್ಚರಿಕೆ ನೀಡಲಾಗುವುದು
ಪ್ರತಿಯೊಬ್ಬ ರೌಡಿ ಶೀಟರ್ ಬಗ್ಗೆ ಮಾಹಿತಿ ಪಡೆದಿದ್ದೇನೆ. ರೌಡಿಗಳ ಮೇಲೆ ಮತ್ತೊಂದು ಪ್ರಕರಣ ಕಂಡುಬಂದರೆ ಗಡಿ ಪಾರು ಮಾಡಲಾಗುತ್ತದೆ.ಆದ್ದರಿಂದ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂದು ಸೂಚನೆ ನೀಡಿದರು.ಈ ವೇಳೆ ಎಎಸ್ಪಿ ಎಂ.ರಾಜೀವ್, ಡಿವೈಎಸ್ಪಿ ಮಂಜುನಾಥ್ ಗಂಗಲ್, ಡಿಸಿಐಬಿ ಇನ್ಸ್‍ಪೆಕ್ಟರ್ ಲಕ್ಷ್ಮಣ್ ನಾಯ್ಕ್, ವಿದ್ಯಾನಗರ ಪಿಎಸ್‍ಐ ಪ್ರಸಾದ್ ಹಾಗೂ ಪೋಲಿಸರಿದ್ದರು.

Leave a Comment