ರೌಡಿಸಂ ಸರ್ಕಾರ್

ರೌಡಿಸಂ ನೀರಿನ ಮೇಲೆ ಗುಳ್ಳೆ ಇದ್ದಂತೆ ಯಾವಾಗ ಏನಾಗುತ್ತದೆ ಎಂಬುದನ್ನು ಹೇಳಲಿಕ್ಕೆ ಆಗದು.ಊಹಿಸಲು ಸಾಧ್ಯವಾಗದು ಇದನ್ನೇ ಪ್ರಧಾನವಾಗಿಟ್ಟು ಕೊಂಡ  ‘ಸರ್ಕಾರ್ ಚಿತ್ರ ಬಹುತೇಕ ಪೂರ್ಣಗೊಂಡಿದೆ. ಸರ್ಕಾರ್ ಅಡಿಬರಹದಲ್ಲಿ ದಿ ಬುಲೆಟ್ ಎಂದಿದೆ ಇದನ್ನು ನೋಡಿದರೆ ಇದು ಪಕ್ಕಾ ರೌಡಿಸಂ ಚಿತ್ರ ಎನ್ನುವದರಲ್ಲಿ ಅನುಮಾನವಲ್ಲ.ಸರ್ಕಾರ್‌ಗೆ   ಹುಬ್ಬಳ್ಳಿ, ಸಾತೋಡಿ ಜಲಪಾತ, ಉಡುಪಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಳೆದ ವರ್ಷ ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಹಾಡುಗಳು  ಬಿಡುಗಡೆಗೊಂಡಿತ್ತು.

ಯಲಹಂಕದ  ಎಸ್.ಮಂಜುಪ್ರೀತಮ್  ಅಪ್ಪಟ ಗಣೇಶ್ ಅಭಿಮಾನಿ. ಚಿಕ್ಕಂದಿನಿಂದಲೂ ಚಿತ್ರರಂಗಕ್ಕೆ ಬರಬೇಕೆಂಬ ಕನಸಿತ್ತು  ಅವಕಾಶಕ್ಕಾಗಿ  ಸೈಕಲ್ ಹೊಡೆದರೂ ಪ್ರಯೋಜನವಾಗಿಲ್ಲ. ಮುಂದೆ ಗಣೇಶ್ ಚಿತ್ರಗಳ ಕಾರ್ಯಕ್ರಮ, ಸೆಟ್‌ನಲ್ಲಿ ನಿರ್ದೇಶಕರ ಚಲನವಲನಗಳನ್ನು  ತಿಳಿದುಕೊಂಡು ಮುಂದೆ ಸ್ವತಂತ್ರ ನಿರ್ದೇಶಕನಾಗಿ ಛಲವನ್ನು ಸಾಧಿಸಿದ್ದಾರೆ.

ಚಿತ್ರದ ಮಹೂರ್ತ ಸಮಾರಂಭಕ್ಕೆ ಖುದ್ದು ಗಣೇಶ್ ದಂಪತಿಗಳನ್ನು ಮಂಜು ಕರೆಸಿ ತಮ್ಮ ಅಭಿಮಾನವನ್ನು ಮೆರೆದಿದ್ದರು ಕಳೆದವಾರ  ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಿ ಮಾತನಾಡಿದ ಮಂಜು, ಬಾಲಿವುಡ್‌ನ ಸರ್ಕಾರ್ ಇದಕ್ಕೂ ಸಂಬಂದ ಇರುವುದಿಲ್ಲ. ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕೆಯನ್ನು  ಶೋಭರಾಜ್  ಇಡಲಾಗಿದ್ದು,  ಒಳ್ಳೆಯ ಕೆಲಸಗಳಿಗೆ ಮಾತ್ರ  ರೌಡಿಯಾಗಿರುತ್ತಾನೆ.  ನಾಯಕ ಇವರ ತಂಡಕ್ಕೆ ಸೇರಿಕೊಂಡು, ಆತನಂತೆ  ಇರುವಾಗ ನಾಯಕಿ ಮಧ್ಯೆ ಪ್ರೀತಿ ಬೆಳಯುತ್ತದೆ.

ಇದಕ್ಕೂ ಮುನ್ನ ಕತೆಯು ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳುತ್ತದೆ.ನಾಯಕ ಬೆಂಗಳೂರಿಗೆ ಬರಲು ಕಾರಣವೇನು.ಆತ ರೌಡಿಸಂ  ಹೇಗೆ ಸೇರಿಕೊಳ್ಳುತ್ತಾನೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ ಎನ್ನುತ್ತಾರೆ ಮಂಜು. ಹುಬ್ಬಳ್ಳಿಯ ಜಾಗ್ವಾರ್‌ಜಗ್ಗಿಗೆ ನಾಯಕನಾಗಿ ಹೊಸ ಅನುಭವ. ಡಾಕ್ಟರ್ ಪಾತ್ರದಲ್ಲಿ ಲೇಖಾಚಂದ್ರ ನಾಯಕಿ. ಇವರೊಂದಿಗೆ ಶೋಭರಾಜ್, ಧರ್ಮ, ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ಉಗ್ರಂಮಂಜು, ನಾಯಕನ ತಾಯಿ ಪಾತ್ರದಲ್ಲಿ ಯಮುನಾ ನಟನೆ ಇದೆ.

ತಂದೆತಾಯಿ, ಪ್ರೀತಿ, ಸ್ನೇಹ, ನಂಬಿದವರು ಎಲ್ಲರೂ ರೌಡಿಸಂ ಮಾಡಿದಾಗ ಕಳೆದುಕೊಳ್ಳುವುದು ಖಚಿತವೆಂದು ಸಂದೇಶದ ಮೂಲಕ ಹೇಳಲಾಗಿದೆ. ಛಾಯಾಗ್ರಹಣ  ರಾಚ್‌ಪುಟಿ ಅರುಣ್‌ಕುಮಾರ್, ಸಾಹಸ ಮಾಸ್‌ಮಾದ, ನೃತ್ಯ ಸ್ಟಾರ್‌ನಾಗಿ, ಸಂಕಲನ ತೇಜು.ಡಿ.ಕುಮಾರ್ ಅವರದಾಗಿದೆ. ಶಂಕರ್‌ಮಹದೇವನ್, ಚಂದನ್‌ಶೆಟ್ಟಿ  ಹಾಡಿರುವ ಐದು ಗೀತೆಗಳಿಗೆ ಸತೀಶ್‌ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯಿಂದ ಬಂದವರೊಬ್ಬರು ನನ್ನ ಕಡೆಯಿಂದ ೧೦೦೦ ಟಿಕೆಟ್ ಖರೀದಿಸುವುದಾಗಿ ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಮಗ ನಾಯಕನಾಗುತ್ತಿರುವುದರಿಂದ ಅವನ ಸಲುವಾಗಿ ಪಾರ್ವತಿ.ಎಸ್. ಸರ್ಕಾರ್‌ಗೆ ಹಣ ಹೊಡಿದ್ದಾರೆ ಈ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

Leave a Comment