ರೋಹಿತ್, ರಹಾನೆ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿಬಿದ್ದ ಹರಿಣಗಳು

 

ರಾಂಚಿ, ಅ ೨೦ – ಹರಿಣಗಳ ವಿರುದ್ಧದ ಅಂತಿಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಚೊಚ್ಚಲ ದ್ವಿಶತಕ ಸಿಡಿಸಿ ಔಟ್ ಆಗಿದ್ದಾರೆ.

ಇಲ್ಲಿನ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್‌ನಲ್ಲಿ ಬೋಜನ ವಿರಾಮ ವೇಳೆಗೆ ಭಾರತ ೪ ವಿಕೆಟ್ ಕಳೆದುಕೊಂಡು ೩೫೭ ರನ್ ಕಲೆಹಾಕಿತ್ತು. ರೋಹಿತ್ ದ್ವಿಶತಕಕ್ಕೆ ಕೇವಲ ೧ ರನ್‌ಗಳ ಅವಶ್ಯಕತೆಯಿತ್ತು. ಬಳಿಕ ಆಟ ಮುಂದುವರೆಸಿದ ರೋಹಿತ್ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಚೆಂಡನ್ನು ಸಿಕ್ಸ್‌ರ್ ಬಾರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಕ ದ್ವಿಶತಕ ಬಾರಿಸಿದರು. ಆದರೆ, ದ್ವಿಶತಕ ಚಚ್ಚಿದ ರೋಹಿತ್ ಬೇಗನೆ ಔಟ್ ಆಗಿ ಪೆವೆಲಿಯನ್ ದಾರಿ ಹಿಡಿದರು. ೮೬ನೇ ಓವರ್ ಹೊತ್ತಿಗೆ ಭಾರತ ೫ ವಿಕೆಟ್ ನಷ್ಟಕ್ಕೆ ೩೭೫ ರನ್ ಗಳಿಸಿತ್ತು.

ಇಂದು ಬೆಳಗ್ಗೆ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿತು. ಶನಿವಾರ ತೋರಿದ ಪ್ರದರ್ಶನವನ್ನೇ ಇಂದೂ ಮುಂದುವರಿಸಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ ೨೬೭ ರನ್ ಗಳಿಸಿ ತಂಡದ ಮೊತ್ತವನ್ನು ೩೦೦ರ ಗಡಿ ದಾಟಿಸಿ ಭಾರತಕ್ಕೆ ಮತ್ತೆ ಆಸರೆಯಾದರು.

ಅದ್ಭುತ ಬ್ಯಾಟಿಂಗ್ ಮಾಡಿದ ಅಜಿಂಕ್ಯಾ ರಹಾನೆ ೧೯೨ ಎಸೆತಗಳನ್ನು ಎದುರಿಸಿ ಒಂದು ಸಿಕ್ಸ್ ಹಾಗೂ ೧೭ ಬೌಂಡರಿಯೊಂದಿಗೆ ೧೧೫ ರನ್ ಗಳಿಸಿ ವೃತ್ತಿ ಜೀವನದ ೧೧ನೇ ಶತಕ ಗಳಿಸಿದರು. ೨೦೧೬ರ ಬಳಿಕ ತವರು ಮಣ್ಣಿನಲ್ಲಿ ಮೊದಲ ಶತಕ ಇದಾಯಿತು. ನಂತರ ರಹಾನೆ, ಜಾರ್ಜ್ ಲಿಂಡೆ ಎಸೆತದಲ್ಲಿ ಔಟ್ ಆದರು. ದಕ್ಷಿಣ ಆಫ್ರಿಕಾ ಪರ ಮೊದಲನೇ ದಿನ ಎರಡು ವಿಕೆಟ್ ಕಿತ್ತಿದ್ದ ಕಗಿಸೋ ರಬಾಡ ಎರಡನೇ ದಿನವಾದ ಇಂದು ವಿಕೆಟ್ ಪಡೆಯಲು ಪರದಾಡಿದರು.

ಚೊಚ್ಚಲ ದ್ವಿಶತಕ ಸಿಡಿಸಿದ ಹಿಟ್ ಮ್ಯಾನ್

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ರೋಹಿತ್ ಶರ್ಮಾ ಅವರು ವೃತ್ತಿ ಜೀವನದ ಚಚ್ಚಲ ದ್ವಿಶತಕ ಸಿಡಿಸಿದರು.
ರೋಹಿತ್ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಬೆಂಡೆತ್ತಿದರು. ೨೫೫ ಎಸೆತಗಳನ್ನು ಎದುರಿಸಿದ ಅವರು ಆರು ಸಿಕ್ಸರ್ ಹಾಗೂ ೨೮ ಬೌಂಡರಿಯೊಂದಿಗೆ ೨೧೨ ರನ್ ಗಳಿಸಿ ಟೆಸ್ಟ್ ವೃತ್ತಿ ಜೀವನದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ನೆರೆದಿದ್ದ ಅಪಾರ ಅಭಿಮಾನಿಗಳ ಪ್ರೀತಿಗೆ ಭಾಜನರಾದರು.

ಮಧ್ಯಾಹ್ನ ಭೋಜನದ ಮುಗಿಸಿಕೊಂಡು ಕ್ರೀಸ್‌ಗೆ ಬಂದ ರೋಹಿತ್ ಶರ್ಮಾ ೮೬ನೇ ಓವರ್ ಮೆಡಿನ್ ಕೊಟ್ಟರು. ನಂತರ, ಲುಂಗಿ ಎನ್ ಗಿಡಿ ಓವರ್ ನ ಮೊದಲನೇ ಎಸೆತವನ್ನೂ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಸಿಡಿಸಿ ದ್ವಿಶತಕ ಸಂಭ್ರಮ ಆಚರಿಸಿದರು. ಈ ಮೂಲಕ ದಾಖಲೆಗಳನ್ನು ಹಿಟ್‌ಮ್ಯಾನ್ ಸರಿಗಟ್ಟಿದ್ದಾರೆ. ನಂತರ ಅವರು ಕಗಿಸೋ ರಬಾಡ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದೇ ಸರಣಿಯ ಮೊದಲ ಟೆಸ್ಟ್‌ನಲ್ಲಿ ೨೭ರನ್‌ಗಳಿಂದ ಚೊಚ್ಚಲ ದ್ವಿಶತಕದಿಂದ ವಂಚಿತರಾಗಿದ್ದ ರೋಹಿತ್ ಅವರು ಇಂದು ಹರಿಣಗಳನ್ನು ಚೆಂಡಾಡಿ ದ್ವಿಶತಕ ಬಾರಿಸಿದರು.

Leave a Comment