ರೋಷನ್‍ ಬೇಗ್‍ ವಿರುದ್ಧ ಎಐಸಿಸಿಗೆ ದೂರು

ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಹಿರಿಯ ಕಾಂಗ್ರೆಸ್ ನಾಯಕ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ದೂರು ನೀಡಲಾಗಿದೆಯಂತೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿ, ರೋಷನ್ ಬೇಗ್‍ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳೋ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಇನ್ನು ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಶಾಸಕ ರೋಷನ್ ಬೇಗ್‍ಗೆ ಕೆಪಿಸಿಸಿ ನೋಟಿಸ್‍ ಜಾರಿ ಮಾಡಿತ್ತು.

ಆದ್ರೆ ಇದಕ್ಕೂ ಕೂಡಾ ಅವರು ಉತ್ತರ ನೀಡಿರಲಿಲ್ಲ. ಇವೆಲ್ಲವುಗಳ ದಾಖಲೆ ಇಟ್ಟುಕೊಂಡು ಕಾಂಗ್ರೆಸ್‍ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍, ರೋಷನ್ ಬೇಗ್‍ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಐಸಿಸಿಗೆ ದೂರು ನೀಡಿದ್ದಾರಂತೆ.

Leave a Comment