ರೋಟರಿ ಸಮೂಹ ಸಂಸ್ಥೆಯಿಂದ ನೆರವಿನ ಸಂಗ್ರಹ

ದಾವಣಗೆರೆ, ಆ. 14 – ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಗೆ ರೋಟರಿ ಸಮೂಹ ಸಂಸ್ಥೆಗಳಿಂದ ನೆರವು ನೀಡಲಾಗಿದೆ. ಈಗಾಗಲೇ ಪ್ರವಾಹ ಪೀಡಿತರಿಗೆ ಅಗತ್ಯವಾಗಿರುವ ಸೀರೆ, ಲುಂಗಿ, ಟವಲ್, ಬ್ಯಾಟರಿ ಹಾಗೂ ಹೊದಿಕೆಗಳನ್ನು ಮೊದಲ ಹಂತದಲ್ಲಿ ರವಾನಿಸಲಾಗಿದೆ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌವರ್ನರ್ ಆರ್.ಎಸ್.ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು ರೋಟರಿ ಸಮೂಹಸಂಸ್ಥೆಗಳಿಂದ ಧನ, ಧಾನ್ಯ ಹಾಗೂ ಅವಶ್ಯಕತೆ ಇರುವ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಹ ಕೈಜೋಡಿಸಬಹುದಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ನೇಹಬಳಗದವರು ಸಹಾಯ ಮಾಡಲು ಇಚ್ಚಿಸಿದ್ದಲ್ಲಿ ರೋಟರಿ ಸಂಸ್ಥೆಗೆ ತಂದು ಕೊಟ್ಟಲ್ಲಿ ಪ್ರವಾಹ ಪೀಡಿತರಲ್ಲಿ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದೇವೆ. ಸಹಾಯ ನೀಡಲಿಚ್ಚಿಸುವವರು ರೋಟರಿ ಬಾಲಭವನದಲ್ಲಿ ಆ.18 ರೊಳಗಾಗಿ ನೀಡಬಹುದಾಗಿದೆ. ಮುಂದಿನ ದಿನಗಳಲ್ಲಿ ಸಂತ್ರಸ್ಥರಿಗೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ನೀಡುವ ಉದ್ದೇಶ ಹೊಂದಿದ್ದೇವೆ. ಮಕ್ಕಳಿಗೆ ಪುಸ್ತಕ, ಯೂನಿಫಾರಂ ಸೇರಿದಂತೆ ಅಗತ್ಯವಿರುವುದನ್ನು ಒದಗಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ವಿಶ್ವಜೀತ್ ಜಾದವ್, ಅಶೋಕ ರಾಯಬಾಗಿ, ಗಜಾನನ ಭೂತೆ, ಶ್ರೀಕಾಂತ್ ಬಗರೆ, ಎಂ.ಎನ್.ಬಿಲ್ಲಳ್ಳಿ, ಮಹಮದ್ ಗೌಸ್ ಇದ್ದರು.

Leave a Comment