ರೋಗನಿರೋಧಕ ಔಷಧಿ ಬಳಕೆ ಹೇಗೆ?

ದೇಹದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಸಾಕು ಕೆಲವರು ರೋಗನಿರೋಧಕ ಔಷಧಗಳ ಬಳಕೆಯನ್ನು ರೂಡಿಸಿಕೊಂಡಿದ್ದಾರೆ. ಕಳೆದ ದಶಕಗಳಿಂದ ಆರೋಗ್ಯ ರಕ್ಷಕವಾಗಿದ್ದು, ಈ ಹಿಂದೆ ಮಾರಣಾಂತಿಕವಾಗಿದ್ದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತಿದ್ದ ಪ್ರತಿಜೀವಕಗಳು ಇಂದು ತಮ್ಮ ಶಕ್ತಿ ಕಳೆದುಕೊಂಡಿವೆ ಎಂಬುದನ್ನು ಪರಿಗಣಿಸಬೇಕಾಗಿದೆ.

ಇಲ್ಲಿಯವರೆಗೆ ಇವು ಜಗತ್ತಿನಾದ್ಯಂತ ಲಕ್ಷಾಂತರ ಸಾವುಗಳನ್ನು ತಡೆದಿವೆ. ದುರದೃಷ್ಟವಶಾತ್, ಅವುಗಳ ಅತಿಯಾದ ಹಾಗೂ ತಪ್ಪು ರೀತಿಯ ಬಳಕೆಗಳು ಅನೇಕ ಔಷಧಿಗಳು ನಿರುಪಯುಕ್ತವಾಗುವ ಹಂತಕ್ಕೆ ತಲುಪಿದ್ದೇವೆ. ಇದನ್ನು ‘ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್’ ಎಂದು ಕರೆಯಲಾಗುತ್ತದೆ, ಇದು ಈಗಾಗಲೇ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸವಾಲಾಗಿ ಮಾರ್ಪಟ್ಟಿದೆ ಮುಂದಿನ ಕೆಲವು ವರ್ಷಗಳಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಮತ್ತಷ್ಟು ಹರಡುವುದನ್ನು ತಡೆಯುವಲ್ಲಿ ಪ್ರತಿ ವ್ಯಕ್ತಿ, ರೋಗಿ, ವೈದ್ಯ ಮತ್ತು ನೀತಿ ನಿರೂಪಕರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

tb1

ಪ್ರತಿಜೀವಕಗಳು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಶಕ್ತಿಯುತ ಮತ್ತು ಜೀವ ಉಳಿಸುವ ಔಷಧಗಳಾಗಿವೆ. ಆದಾಗ್ಯೂ, ಅವುಗಳನ್ನು ಅನಗತ್ಯವಾಗಿ, ಇಲ್ಲವೇ ತೆಗೆದುಕೊಳ್ಳಬೇಕಾದಕ್ಕಿಂತ ಹೆಚ್ಚಿನ ಅಥವಾ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ, ಜ್ವರ ಅಥವಾ ಸಾಮಾನ್ಯ ಶೀತ-ಜ್ವರದ ಹೆಚ್ಚಿನ ಸಂದರ್ಭಗಳಲ್ಲಿ ವೈರಲ್ ಸೋಂಕುಗಳನ್ನು ತಡೆಯಲು ಅವುಗಳನ್ನು ತೆಗೆದುಕೊಳ್ಳಬಹುದು. ಅಥವಾ, ರೋಗಿಗಳು ತಮ್ಮ ಚಿಕಿತ್ಸೆಯ ಕೋರ್ಸ್ ಅನ್ನು ಮುಗಿಸದಿರಬಹುದು. ಇವೆಲ್ಲವೂ ಆಂಟಿಮೈಕ್ರೊಬಿಯಲ್ ಪ್ರತಿರೋಧದ ಅಪಾಯಕ್ಕೆ ಕಾರಣವಾಗಿದೆ ಎಂದು ಎಂದು ಡಾ.ಪ್ರದೀಪ್ ರಂಗಪ್ಪ ತಿಳಿಸಿದ್ದಾರೆ.

*ವೈದ್ಯರು ನಿಮಗೆ ಸೂಚಿಸಿದಾಗ ಮಾತ್ರ ಪ್ರತಿಜೀವಕಗಳನ್ನು ಸೇವಿಸಿರಿ. ಆದ್ದರಿಂದ ಬೇರೆಯವರ ಶಿಫಾರಸಿನ ಮೇರೆಗೆ ಅದನ್ನು ಸೇವಿಸಬೇಡಿ- ಮತ್ತು ಇದು ಸ್ವಯಂ ಚಿಕಿತ್ಸೆ, ಔಷಧಿಗಳನ್ನೂ ಒಳಗೊಂಡಿದೆ.

*ನಿಮ್ಮ ಆರೋಗ್ಯ ಸುಧಾರಿಸಲು ಪ್ರಾರಂಭಿಸಿದ ನಂತರವೂ ಪ್ರತಿಜೀವಕ ಚಿಕಿತ್ಸೆಯ ಸಂಪೂರ್ಣ ಕೋರ್ಸ್ ಅನ್ನು ಪೂರ್ಣಗೊಳಿಸಿ. ಇದರರ್ಥ ನಿಮಗೆ ೫ ದಿನಗಳ ಪ್ರತಿಜೀವಕಗಳ ಕೋರ್ಸ್ ನೀಡಲಾಗಿದ್ದರೂ ೩ ದಿನಗಳ ನಂತರ ಉತ್ತಮವಾಗಿದ್ದರೆ, ನೀವು ಇನ್ನೂ ೨ ಹೆಚ್ಚುವರಿ ದಿನಗಳವರೆಗೆ ಪ್ರತಿಜೀವಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉಳಿದಿರುವ ಪ್ರತಿಜೀವಕಗಳನ್ನು ಮರುಬಳಕೆ ಮಾಡಬೇಡಿ.

*ನಿಮ್ಮ ಪ್ರತಿಜೀವಕಗಳನ್ನು ಹಂಚಿಕೊಳ್ಳಬೇಡಿ. ಸೋಂಕು ಒಂದೇ ಆಗಿದ್ದರೂ ಸಹ ನಿಮಗೆ ಕೆಲಸ ಮಾಡಿದ ಪ್ರತಿಜೀವಕವು ಬೇರೆಯವರಿಗೆ ಕೆಲಸ ಮಾಡದಿರಬಹುದು. ಪ್ರತಿಜೀವಕಗಳ ಹಂಚಿಕೆಯು ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡಬಹುದು.
*ಪ್ರಸ್ತುತ ಪರಿಸ್ಥಿತಿಯಲ್ಲಿ, ೨೦೫೦ ರ ವೇಳೆಗೆ ಆಂಟಿಮೈಕ್ರೊಬಿಯಲ್ ನಿರೋಧಕ ಸೋಂಕುಗಳು ಜಾಗತಿಕವಾಗಿ ಸುಮಾರು ೧೦ ಮಿಲಿಯನ್ ಸಾವುಗಳಿಗೆ ಕಾರಣವಾಗಬಹುದು, ಅದರಲ್ಲಿ ೨ ಮಿಲಿಯನ್ ಸಾವುಗಳು ಭಾರತದಲ್ಲಿ ಸಂಭವಿಸಲಿವೆ ಎಂದು ಎಚ್ಚರಿಸಲಾಗಿದೆ.

Leave a Comment