ರೊನಾಲ್ಡೊ ಮುಡಿಗೆ ‘ಇಟಾಲಿಯನ್ ವರ್ಷದ ಆಟಗಾರ’ ಗರಿ

ಮಿಲನ್, ಡಿ 3 – ವೃತ್ತಿ ಜೀವನದ ಆರನೇ ಬಾರಿ ‘ಬ್ಯಾಲನ್ ಡಿ ಓರ್’ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲರಾದ ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರು ‘ವರ್ಷದ ಇಟಾಲಿಯನ್ ಲೀಗ್ ಆಫ್ ದಿ ಆಟಗಾರ’ ಪ್ರಶಸ್ತಿಗೆ ಭಾಜನರಾದರು.

ಇಟಾಲಿಯನ್ ಲೀಗ್ ಜುವೆಂಟಾಸ್ ಪರ ಆಡಿದ ಚೊಚ್ಚಲ ಆವೃತ್ತಿಯಲ್ಲೇ ರೊನಾಲ್ಡೊ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ವಿಶೇಷವಾಗಿದೆ. ಫುಟ್ಬಾಲ್ ಕ್ರೀಡೆಯಲ್ಲಿ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಬ್ಯಾಲನ್ ಡಿ ಓರ್ ಪ್ರಶಸ್ತಿ ರೇಸ್ ನಲ್ಲಿ ರೊನಾಲ್ಡೊ ಮೂರನೇ ಸ್ಥಾನ ಪಡೆದಿದ್ದರು. ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಈ ಗೌರವ ಸ್ವೀಕರಿಸಿದ್ದರು.

“ಇಟಾಲಿಯನ್ ವರ್ಷದ ಆಟಗಾರ ಪ್ರಶಸ್ತಿ ಪಡೆದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಇಟಲಿಯಲ್ಲಿ ಆಡಲು ತುಂಬಾ ಖುಷಿಯಾಗುತ್ತಿದೆ. ಇದೊಂದು ಕ್ಲಿಷ್ಟಕರವಾರ ಲೀಗ್ ಆಗಿದೆ. ನನಗೆ ಬಹುಮತ ನೀಡಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ವರ್ಷ ಇನ್ನಷ್ಟು ಜುವೆಂಟಾಸ್ ಪರ ಸಾಧನೆ ಮಾಡಲು ಪ್ರಯತ್ನಿಸುತ್ತೇನೆ.” ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ರೊನಾಲ್ಡೊ ಹೇಳಿದರು.

ಇದೇ ಮೊದಲ ಬಾರಿ ಮಹಿಳೆಯರಿಗೂ ಇಟಾಲಿಯನ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರೋಮ ಹಾಗೂ ಇಟಲಿಯ ಮುಂಚೂಣಿ ಆಟಗಾರ್ತಿ ಮ್ಯಾನ್ಯೂಲಾ ಅವರಿಗೆ ಮಹಿಳೆಯರ ವಿಭಾಗದಲ್ಲಿ ಈ ಗೌರವ ಪಡೆದರು. ಮಿಶ್ರ ಫುಟ್ಬಾಲ್ ಪಟುಗಳು, ಕೋಚ್ ಗಳು, ರೆಫರಿಗಳು ಹಾಗೂ ಪತ್ರಕರ್ತರಿಂದ ಈ ಎಲ್ಲ ಪ್ರಶಸ್ತಿಗಳಿಗೆ ಆಟಗಾರರನ್ನು ಬಹುಮತಗಳಿಂದ ಆಯ್ಕೆ ಮಾಡಲಾಗುತ್ತದೆ.

ಕ್ರಿಸ್ಟಿಯಾನೊ ರೊನಾಲ್ಡೊ ಅವರು ರಿಯಲ್ ಮ್ಯಾಡ್ರಿಡ್ ನಿಂದ 2018ರ ಜುಲೈ ತಿಂಗಳಲ್ಲಿ ಇಟಲಿಯ ಜುವೆಂಟಾಸ್ ಕ್ಲಬ್‍ಗೆ ಸಹಿ ಮಾಡಿದ್ದರು. ಇವರ ಅದ್ಭುತ ಆಟದ ನೆರವಿನಿಂದ ಜುಂವೆಂಟಾಸ್ ತಂಡ ಸಿರಿಯಾ ಎ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 21 ಲೀಗ್ ಪಂದ್ಯಗಳಿಂದ 3ರ ಪ್ರಾಯದ ರೊನಾಲ್ಡೊ 28 ಗೋಲು ಸಿಡಿಸಿದ್ದರು.

Leave a Comment