ರೊಕ್ಕಕ್ಕೆ ಹೋದವರು ರೋಗ ತಂದರು: ರಾಜಭಾರತಿ ಸ್ವಾಮಿ

ಬಳ್ಳಾರಿ, ಏ.3: ಹಣಕ್ಕೆ ಹೋದವರು ಹೆಣವಾಗಿ ಬಂದ್ರು, ರೊಕ್ಕಾ ತರಲು ಹೋದವರು ರೋಗ ತಂದ್ರು. ಇದು ಸಂಡೂರು ತಾಲೂಕಿನ ಜೋಗದ ರಾಜ ಭಾರತಿ ಸ್ವಾಮಿಯ ನುಡಿ.
ದೇಶದಲ್ಲು‌ ಕರೋನಾ ಸೋಂಕು‌ ಹರಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಅವರು ನಮ್ಮ ದೇಶದಲ್ಲಿ ಇಂತಹ ಮಹಾಮಾರಿ ಹಿಂದೆ ಬಂದಿರಲಿಲ್ಲ ಮುಂದೆಯೂ ಬರಲ್ಲ.

ದೇವರ ಮೇಲೆ ವಿಶ್ವಾಸ ಇಟ್ಟು ಪೂಜೆ ಮಾಡಿದ್ರೆ ಕಾಯಿಲೆ ಹೋಗತ್ತೆ. ತಾತ್ಕಾಲಿಕವಾಗಿ ಬಂದದ್ದು ತುರಂತವಾಗಿ ಹೋಗೋದು ಕಷ್ಟ ಎಂದಿದ್ದಾರೆ.
ಹೊರದೇಶಕ್ಕೆ ಹಣ ಸಂಪಾದನೆ ಮಾಡಲು ಹೋದವರೇ ಇದಕ್ಕೆಲ್ಲ ಕಾರಣ ಎಂದಿರುವ ಅವರು. ಹಣ ಗಳಿಸೋ ಸ್ವಾರ್ಥಿಗಳಿಂದ ಇಂದು ಬಡ ಜನ ಬಲಿಯಾಗುತ್ತಿದ್ದಾರೆ.

ಹಣ ಗಳಿಸುವರ ಸ್ವಾರ್ಥವೇ ಇದಕ್ಕೆಲ್ಲಾ ಕಾರಣ ಇವರಾರು ಸಮಾಜ ಸೇವಕರಲ್ಲ ಎಂದಿದ್ದಾರೆ. ನಮ್ಮದು ಬಡ ರಾಷ್ಟ್ರ, ಸಂಸ್ಕೃತಿ ಸಂಪ್ರದಾಯ ಇಟ್ಟುಕೊಂಡಿರೋ ರಾಷ್ಟ್ರ.
ಕೆಲವರು ದೇವರ ಗುಡಿಗೆ ಹೋಗಬೇಡಿ ಅಂದರು. ಪೂಜೆನೇ ಬೇಡ ಮುಚ್ಚಿ ಅಂದರು ದೇವರ ಮೇಲೆ ವಿಶ್ವಾಸ ಇಟ್ಟು ಪೂಜೆ ಮಾಡಿದರೆ ಕಾಯಿಲೆ ಹೋಗತ್ತೆ.
ಇದಕ್ಕೆ ಜನರ ಸಹಕರಿಸಿ ಅಂತಾ ಹೇಳೋದು ಬಿಟ್ಟು ಜನರ ದಾರಿ ತಪ್ಪಿಸ ಬೇಡಿ ಎಂದಿದ್ದಾರೆ.

Leave a Comment