ರೈಲ್ವೇ ಬ್ರಿಡ್ಜ್ ಬಳಿ ರಿಕ್ಷಾ ಚಾಲಕನ ಶವ ಪತ್ತೆ

ಮಂಗಳೂರು, ಆ.೨೩- ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಚೇಳಾಯರು ರೈಲ್ವೇ ಬ್ರಿಡ್ಜ್ ಬಳಿ ಶವವೊಂದು ಇಂದು ಮುಂಜಾನೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಹಳೆಯಂಗಡಿಯ ರಿಕ್ಷಾ ಚಾಲಕ ನವೀನ್ (೩೮) ಎಂದು ಗುರುತಿಸಲಾಗಿದೆ. ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನವೀನ್ ಅವರನ್ನು ಕೊಲೆ ನಡೆಸಿ, ರೈಲ್ವೇ ಬ್ರಿಡ್ಜ್ ಬಳಿ ಎಸೆದು ಹೋಗಿರಬಹುದೇ ಎಂಬ ಅನುಮಾನ ಕೂಡ ಮೂಡಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮೂಲಗಳ ಪ್ರಕಾರ ನವೀನ್ ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Leave a Comment