ರೈಲ್ವೆ ನಿಲ್ದಾಣ : ವಿದ್ಯುತ್ ಸ್ಪರ್ಶ – ಕರಕಲಾದ ಯುವಕ

ರಾಯಚೂರು.ಜು.17- ರೈಲ್ವೆ ಆಯಿಲ್ ಭೋಗಿ ಮೇಲೆ ಹತ್ತಿದ ಅಪರಿಚಿತ ಯುವಕ ವಿದ್ಯುತ್ ಸ್ಪರ್ಶಕ್ಕೆ ಸುಟ್ಟು ಕರಕಲಾದ ದಾರುಣ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಘಟಿಸಿದೆ.
ರೈಲು ಸಂಚಾರಕ್ಕೆ ಬಳಸುವ 1200 ಮೆ.ವ್ಯಾ. ವಿದ್ಯುತ್ ತಂತಿಯ ಸ್ಪರ್ಶದಿಂದ ಕ್ಷಣಾರ್ಧದಲ್ಲಿ ಅಪರಿಚಿತ ಯುವಕ ಮೃತಪಟ್ಟ ಘಟನೆ ನಡೆಯಿತು. ಆಯಿಲ್ ಸಾಗಿಸುವ ಗೂಡ್ಸ್ ರೈಲು ನಗರದ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಭೋಗಿಯ ಮೇಲೆ ಹತ್ತಿದ ಅಪರಿಚಿತ ಯುವಕನ ಪಕ್ಕದಲ್ಲಿದ್ದ 1200 ಮೆ.ವ್ಯಾ. ವಿದ್ಯುತ್ ತಂತಿ ಬಗ್ಗೆ ಗಮನ ನೀಡದಿರುವುದು ಈ ದಾರುಣಕ್ಕೆ ಕಾರಣವಾಯಿತು.
ರೈಲ್ವೆ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಜೋರಾದ ಶಬ್ಧವೊಂದು ಕೇಳಿದ ಪ್ರಯಾಣಿಕರು ಬೆಚ್ಚಿಬಿದ್ದರು. ಶಬ್ಧ ಬಂದ ಸ್ಥಳ ಪರಿಶೀಲಿಸಿದಾಗ ಸುಟ್ಟುಕರಕಲಾದ ಆವಸ್ಥೆಯಲ್ಲಿ ಬಿದ್ದಿದ್ದ ಯುವಕನ ಶವ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಭಾರೀ ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟ ಅಪರಿಚಿತ ಯುವಕ ಯಾರು ಎನ್ನುವುದು ತಿಳಿದು ಬಂದಿಲ್ಲ.

Leave a Comment