ರೈಲುಗಳ ಡಿಕ್ಕಿ-29 ಮಂದಿಗೆ ಗಾಯ

ಮನಿಲಾ, ಮೇ ೧೯-ಎರಡು ರೈಲುಗಳು ಮುಖಾಮುಖಿ ಅಪ್ಪಳಿಸಿದ ಪರಿಣಾ ಕನಿಷ್ಠ 29 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ನಿನ್ನೆ ರಾತ್ರ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮನಿಲಾದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಅಪ್ಪಳಿಸಿದೆ. ಲಘು ರೈಲಿನ ಎರಡನೆ ಟ್ರ್ಯಾಕಿನಲ್ಲಿ ಮತ್ತು ಪಶ್ಚಿಮ ಮನಿಲಾ ಮೆಟ್ರೊ ನಿಲ್ದಾಣದಲ್ಲಿ ಡಿಕ್ಕಿ ಸಂಭವಿಸಿದೆ ಡಿಕ್ಕಿಯ ರಭಸಕ್ಕೆ ಬಹಳ ಜೋರಾಗಿ ಶಬ್ಬ ಕೇಳಿಬಂದಿದ್ದರಿಂದ ಪ್ರಯಾಣಿಕರು ಗಾಬರಿಗೊಂಡರು. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ರೈಲ್ವೆ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಡಿಕ್ಕಿ ಸಂಭವಿಸಿರುವ ಬಗ್ಗೆ ನಿಯಂತ್ರಣ ಕೇಂದ್ರ ತನಿಖೆ ಕೈಗೊಂಡಿದೆ ಇಲಾಖೆ ತಿಳಿಸಿದೆ. ರೈಲುಗಳ ಡಿಕ್ಕಿಯಿಂದಾಗಿ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

Leave a Comment