ರೈಲಿಗೆ ಸಿಕ್ಕಿ ಯುವಕ ಆತ್ಮಹತ್ಯೆ

ತುಮಕೂರು, ಆ. ೩೧- ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಸಮೀಪ ನಡೆದಿದೆ.
ಚಲಿಸುತ್ತಿದ್ದ ಯಾವುದೋ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಿಗೆ ಸುಮಾರು 25 ವರ್ಷ ವಯಸ್ಸಾಗಿದ್ದು, ಹೆಸರು-ವಿಳಾಸ ತಿಳಿದು ಬಂದಿಲ್ಲ.
ಮೃತ ಯುವಕ ದೃಢಕಾಯ ಶರೀರ ಹೊಂದಿದ್ದು, ಶವವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ತುಮಕೂರು ರೈಲ್ವೆ ಸಹಾಯ ಸಬ್‌ಇನ್ಸ್‌ಪೆಕ್ಟರ್ ಕಾಂತರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

Leave a Comment