ರೈಲಿಗೆ ಬಿದ್ದು ಕ್ಯಾಮೆರಾಮನ್ ಆತ್ಮಹತ್ಯೆ

 

ಕಲಬುರಗಿ,ಜೂ.30-ರೈಲಿಗೆ ಬಿದ್ದು ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಶಹಾಬಾದ ತಾಲ್ಲೂಕಿನ ತೊನಸನಹಳ್ಳಿ ಗ್ರಾಮದ ಹಣಮಂತರಾವ ಎಸ್.ಟಿ (42) ಆತ್ಮಹತ್ಯೆ ಮಾಡಿಕೊಂಡವರು.

ಸೋಮವಾರ ಮಧ್ಯಾಹ್ನ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಹತ್ತಿರದ ಸೇತುವೆಯ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಹಣಮಂತರಾವ ಅವರು ಈ ಹಿಂದೆ ಟಿವಿ-9ನಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಬೆಂಗಳೂರು ಮೂಲದ ಮೈ ಡ್ರೀಮ್ಸ್ ಮೆಟ್ರೋ ಚಾನಲ್ ಖಾಸಗಿ ವಾಹನಿಯ ಕ್ಯಾಮೆರಾಮನ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದರು. ಅವರ ಶವದ ಬಳಿ ಸಿಕ್ಕ ಗುರುತಿನ ಚೀಟಿಯಿಂದ ಈ ವಿಷಯ ಗೊತ್ತಾಗಿದೆ. ಅವರ ರುಂಡ-ಮುಂಡ ತುಂಡಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Share

Leave a Comment