ರೈತಸಂಘ ಸಂಘದ ಪ್ರತಿಭಟನೆ

ಹರಪನಹಳ್ಳಿ.ಸೆ.9- ಪೆಟ್ರೋಲ್, ಡಿಸೇಲ್ ಹಾಗೂ ಸಿಲಿಂಡರ್ ದರ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸೀರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣ ಕೇಂದ್ರ ಸರ್ಕಾರ ನೀತಿಯನ್ನು ಖಂಡಿಸಿ ರಸ್ತೆ ತಡೆ ಚಳುವಳಿ ನಡೆಸಿದರು. ಕೆಲವು ಸಮಯದವರೆಗೆ ವಾಹನಗಳ ಸಂಚಾರಕರಿಗೆ ಸಂಚರಿಸಲು ಅಡೆತಡೆಮಾಡಲಾಯಿತು ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ಕಛೇರಿಯ ಸಿಬ್ಬಂದಿ ಬಂದು ಮನವಿ ಸ್ವಿಕರಿಸಿದರು. ಪಟ್ಟಣದ ಇಜಾರಿ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಸೀರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣದ ಮುಖಂಡರು ನಮ್ಮ ಬೇಡಿಕೆ ಕೂಡಲೇ ಈಡೇರಿಸಬೇಕು. ತೈಲ ದರ ಹೆಚ್ಚಿಸಿರುವುದರಿಂದ ಬಡ ಜನತೆಗೆ ತೀವ್ರವಾದ ಆರ್ಥಿಕ ಹೊರೆ ಹೊರುವಂತಹ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಕೇಂದ್ರ ಸರ್ಕಾರವು ಈ ಕೂಡಲೇ ಪೆಟ್ರೂಲ್, ಡಿಸೇಲ್ ಹಾಗೂ ಸಿಲಿಂಡರ್ ದÀರ ಇಳಿಕೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ, ತಾಲೂಕು ಅಧ್ಯಕ್ಷ ಡಿ.ಹನುಮಂತಪ್ಪ, ತಲವಾಗಲು ಕರಿಯಪ್ಪ, ಕುಮಾರ ನಾಯ್ಕ, ಸೂರ್ಯನಯ್ಕ, ಹಾಲೇಶ್ಪ್ಪ, ಸಿದ್ದಣ್ಣ, ಕೆಂಚಪ್ಪ, ಹನುಮಂತಪ್ಪ ಯಂಕಪ್ಪ,ಯಲ್ಲಪ್ಪ, ಪಕೀರಪ್ಪ, ಕೆಂಚಪ್ಪ, ವಸಂತ, ಹಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Leave a Comment