ರೈತರ ಹೋಳ ಹಬ್ಬಕ್ಕೆ ಸಂಭ್ರಮದ ತಯ್ಯಾರಿ

ರಿಯಾಜಪಾಶಾ ಕೊಳ್ಳೂರ

ಔರಾದ: ಜಾನುವಾರುಗಳ ಹಬ್ಬ ರೈತರ ಹಬ್ಬ ಎಂದು ಕರೆಯಲಾಗುವ `ಹೋಳ ಹಬ್ಬ’ವನ್ನು ರೈತರು ಸಂಭ್ರಮದಿಂದ ಆಚರಿಸಲು ತಯಾರಿಯಲ್ಲಿ ತೋಡಗಿದ್ದಾರೆ.

ಉತ್ತರ ಕರ್ನಾಟಕದ

ರೈತರ ದೊಡ್ಡ ಹಬ್ಬ ಎಂದೇ ಬಿಂಬಿತವಾಗಿರುವ ಈ ಹಬ್ಬದ ದಿನ ರೈತರ ಮನೆಯಲ್ಲಿ ಋಷಿ ಮನೆ ಮಾಡಿರುತ್ತದೆ. ಬದುಕಿಗೆ ಆಸರೆಯಾದ ಆಕಳು, ಎತ್ತು, ಹೋರಿಗಳಿಗೆ ಸ್ನಾನ ಮಾಡಿಸಿ ವಧು ವರರಂತೆ ವೈವಿಧ್ಯಮಯ ಬಣ್ಣ ಬಳಿದು ಸಿಂಗರಿಸುತ್ತಾರೆ.

ಜಾನುವಾರುಗಳಿಗಾಗಿ ನೈವೇದ್ಯ ಅಡಿಗೆ :

ರೈತರೆಲ್ಲರೂ ತಮ್ಮ ಮನೆಗಳಲ್ಲಿ ಹಬ್ಬದಂದು ವಿಷೆಶ ಖ್ಯಾದಗಳಾದ ಹೋಳಿಗೆ, ಕೋಡುಬಳೆ, ಮುರಕುಲ್ ಸೇರಿದಂತೆ ವಿವಿಧ ಬಗೆಯ ನೈವೇದ್ಯ ಮಾಡಿ, ಜಾನುವಾರು ಗಳಿಗೆ ತಿನ್ನಿಸಿ, ತಾವು ಸವಿದು ಸಂಭ್ರಮಿಸುತ್ತಾರೆ

ಸಂಜೆ ಎಲ್ಲ ರೈತರು ತಮ್ಮ ಜಾನುವಾರುಗಳನ್ನು ತಮ್ಮ ಗ್ರಾಮದ ದೇಗುಲದ ಮುಂದೆ ಸಾಲಾಗಿ ನಿಂತು ಜಾನುವಾರು ಗಳು ಒಂದೊಂದಾಗಿ ಹನುಮಾನ ದೇವಸ್ಥಾನಕ್ಕೆ ಸುತ್ತ ಸುತ್ತ ಸುತ್ತಿಸಿ ದರ್ಶನ ಮಾಡಿಸುತ್ತಾರೆ. ಗ್ರಾಮಗಳಲ್ಲಿ ದೇವಸ್ಥಾನ ಸಮಿತಿ ಯವರು ಅತ್ಯುತ್ತಮವಾಗಿ ಅಲಂಕೃತ ಗೊಂಡ ಜಾನುವಾರುಗಳಿಗೆ ಆಯ್ಕೆ ಮಾಡಿ ಬಹುಮಾನ ನೀಡುತ್ತಾರೆ.

ಅಲಂಕೃತ ವಸ್ತುಗಳ ಖರೀದಿ:

ರೈತರು ತಮ್ಮ ಜಾನುವಾರುಗಳನ್ನು ಅಲಂಕರಿಸಲು ಔರಾದ ಪಟ್ಟಣದ ಅಂಗಡಿಗಳಲ್ಲಿ ಖರೀದಿ ಜೋರಾಗಿ ನಡೆಯುತ್ತಿದ್ದು ಘಂಟೆ, ಹುರುಗೆಜ್ಜೆ, ಕೌಡೆ ಸರ, ಕುರೆನುಲೀನ ದಾಂಡ, ಖೋಡಿಗೆ ಮತಾಟಿಗಳು, ಭಾಸಿಂಗ, ಝುಲ್, ಬೆಲ್ಲದ ರಸ(ಕಾರಿಂಗ) ರೈತರು ತಮ್ಮ ನೆಚ್ಚಿನ ಹಬ್ಬಕ್ಕೆ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಂಗಾರಕ್ಕಾಗಿ ವಿವಿಧ ಬಗೆಯ ವಸ್ತುಗಳ ಖರೀದಿಗೆ ರೈತರು ಬರುತಿದ್ದು ವಿವಿಧ ಬಗೆಯ ವಸ್ತುಗಳ ಖರೀದಿಗೆ ಬರುತಿದ್ದಾರೆ ಎಂದು ವ್ಯಾಪಾರಸ್ಥರಾದ ಶ್ರೀಕಾಂತ ಅಲ್ಮಾಜೆ, ರಜನೀಕಾಂತ್ ಅಲ್ಮಾಜೆ ತಿಳಿಸಿದ್ದಾರೆ.

ಯಂತ್ರೋಪಕರಣ ಬಳಕೆಯಿಂದ ಕುಗ್ಗುತ್ತಿರುವ ಹಬ್ಬ:

ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಹೆಚ್ಚುತ್ತಿದಂತೆಯೇ ಇತ್ತೀಚೆಗೆ ಜಾನುವಾರುಗಳಳ ಸಂಖ್ಯೆ ಕಡಿಮೆಯಾಗುತ್ತಿದ್ದು ರೈತರ ಹಬ್ಬ ಸಂಭ್ರಮದ ಕಳೆ ಕಳೆದುಕೊಳ್ಳುತ್ತಿದ್ದು ಗ್ರಾಮೀಣ ಭಾಗದ ಹಬ್ಬದ ವಾತಾವರಣ ಕ್ಷೀಣಿಸುತ್ತಿದೆ ಎಂದು ಪ್ರಗತಿಪರ ರೈತ ಬಾಬುಮಿಯ್ಯಾ ಕಳವಳ ವ್ಯಕ್ತಪಡಿಸಿದ್ದಾರೆ.

Leave a Comment