ರೈತರ ಸ್ಪೂರ್ತಿಗೆ ಕೃಷಿ ಅಭಿಯಾನ

ಮುಂಡಗೋಡ,ನ.18- ರೈತರಲ್ಲಿ ಸ್ಪೂರ್ತಿ, ಉತ್ತೇಜನ ತುಂಬಲು ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಹೇಳಿದರು.
ಗುರುವಾರ ಅವರು ಮುಂಡಗೋಡದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತು, ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ರೈತರು ಈ ಕೃಷಿ ಅಭಿಯಾನದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕರವು ಕೃಷಿಗೆ ಹೆಚ್ಚು ಒತ್ತು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ, ತಾ.ಪಂ.ಸದಸ್ಯರಾದ ರಮೇಶ ರಾಯ್ಕರ್ ಮತ್ತು ಸುನೀತಾ ಲಮಾಣಿ, ಕೃಷಿ ಅಧಿಕಾರಿ ಅರವಿಂದ ಕಮ್ಮಾರ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ಗ್ರಾ.ಪಂ.ಸದಸ್ಯ ರಾಮಣ್ಣ ಲಮಾಣಿ, ಬಾಬುಲಾಲ ಮಕಾನದಾರ, ಪಿ.ಜಿ.ತಂಗಚ್ಚನ್, ಉಮೇಶ ಗಾಣಿಗೇರ, ಶಂಭಣ್ಣ ಕೊಳೂರ ಮುಂತಾದವರಿದ್ದರು.

Leave a Comment