ರೈತರ ಸಹಾಯಕ್ಕೆ ಮುಂದಾದ ನಟಿ ಜುಹಿ ಚಾವ್ಲಾ

ಮುಂಬೈ, ಮೇ 21 — ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದ್ದು, ರೈತರಿಗೆ ಸಹಾಯ ಮಾಡಲು ಬಾಲಿವುಡ್ ಬಬ್ಲಿ ನಟಿ ಜುಹಿ ಚಾವ್ಲಾ ಮುಂದೆ ಬಂದಿದ್ದಾರೆ.

ಮುಂಬೈನಿಂದ ಸ್ವಲ್ಪ ದೂರದಲ್ಲಿ ಜುಹಿ ಅವರ ಕೃಷಿ ಭೂಮಿ ಇದೆ. ಅಲ್ಲಿ ಸಾವಯವ ಕೃಷಿ ತಜ್ಞರ ತಂಡವು ಅಭ್ಯಾಸ ನಡೆಸುತ್ತಿದೆ. ಈ ಋತುವಿನಲ್ಲಿ ಭತ್ತದ ಕೃಷಿ ಮಾಡಲು ಜುಹಿ ಈಗ ಭೂಹೀನ ರೈತರಿಗೆ ಅದನ್ನು ನೀಡಲು ಮುಂದಾಗಿದ್ದಾರೆ.

“ನಾವು ಪ್ರಸ್ತುತ ಲಾಕ್‌ಡೌನ್‌ನಲ್ಲಿರುವುದರಿಂದ, ನನ್ನ ಭೂಮಿಯನ್ನು ಭೂಹೀನ ರೈತರ ಕೃಷಿಗಾಗಿ ನೀಡಲು ನಿರ್ಧರಿಸಿದ್ದೇನೆ. ಅವರು ಈ ಋತುವಿನಲ್ಲಿ ಇಲ್ಲಿ ಭತ್ತವನ್ನು ಬೆಳೆಸಬಹುದು. ಮತ್ತು ಉತ್ಪನ್ನದ ಒಂದು ಸಣ್ಣ ಭಾಗವನ್ನು ತಮಗಾಗಿ ಇಟ್ಟುಕೊಳ್ಳಬಹುದು. ಹಿಂದಿನ ದಿನಗಳಲ್ಲಿ ಜನರು ಈ ರೀತಿ ಕೃಷಿ ಮಾಡುತ್ತಿದ್ದರು. ಇದು ಒಳ್ಳೆಯದು. ನಮ್ಮ ರೈತರಿಗೆ ನಗರದಲ್ಲಿ ವಾಸಿಸುವ ಜನರಿಗಿಂತ ಮಣ್ಣು, ಗಾಳಿ, ಭೂಮಿ ಬಗ್ಗೆ ಹೆಚ್ಚು ತಿಳಿದಿದೆ” ಎಂದು ತಿಳಿಸಿದ್ದಾರೆ.

ಈ ಭತ್ತದ ಕೃಷಿಯ ಮೇಲೆ ಕಣ್ಣಿಡಲು ಜುಹಿ ತನ್ನ ಜನರನ್ನು ಕೇಳಿಕೊಂಡಿದ್ದಾರೆ. ಇದರಿಂದ ಅವುಗಳನ್ನು ಬೆಳೆಯಲು ಸಾವಯವ ವಿಧಾನಗಳನ್ನು ಮಾತ್ರ ಬಳಸಬಹುದಾಗಿದೆ.

Leave a Comment