ರೈತರ ಧರಣಿಗೆ ಭಾರಿ ಬೆಂಬಲ

ಬೆಂಗಳೂರ ಜು 11 –    ರೈತರ ಸಾಲಮನ್ನಾ ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಕಳಸಾ ¨ಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಅಡ್ಡಿಗಳನ್ನು ನಿವಾರಿಸಿ ಎಂಬ ಆಗ್ರಹದೊಡನೆ ಪಕ್ಷಾತೀತ ರೈತ ಹೋರಾಟ ಸಮಿತಿ ಇಂದು ಇಲ್ಲಿನ ರೈಲು ನಿಲ್ದಾಣಕ್ಕೆ ಆಗಮಿಸಿದ ನವಲಗುಂದ, ನರಗುಂದ ಭಾಗದ ರೈತರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಧರಣಿ  ಸ್ಥಳವಾದ ಪ್ರೀಡಂ ಪಾರ್ಕಗೆ ಕರೆದೊಯ್ಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷಾತೀತ ರೈತ ಹೋರಾಟ ಸಂಘದ ಧುರೀಣರಾದ ರಾಜಶೇಖರ ಮೆಣಸಿನಕಾಯಿ, ರೈತರು ನಾಲ್ಕೈದು ವರ್ಷ ಬರದ ಭವನೆಯಲ್ಲಿ ನಲುಗಿದ್ದು ಸಂಪೂರ್ಣವಾಗಿ ರೈತರ ಸಾಲಮನ್ನಾ ಮಾಡುವ ಅವಶ್ಯಕತೆಯಿದೆ ಎಂದು ನುಡಿದರು.
ಸಾಲದ ಭವಣೆಯಿಂದ ನೇಣಿಗೆ ಕೊರಳು ಒಡ್ಡುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಕ್ರಮ ಕೈಕೊಳ್ಳಲು ಅಗತ್ಯವಿದೆ.
ದೇಶದ ಬೆನ್ನೆಲಬು ಆಗಿರುವ ಅನ್ನದಾತನ ಸಂಕಷ್ಟಗಳ ನಿವಾರಣೆ ಅತಿ ಮಹತ್ವದಾಗಿದೆ. ಇದೇ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅತಿ ಅವಶ್ಯವಾದ ಕಳಸಾ ¨ಂಡೂರಿ ನಾಲಾ ಜೋಡಣೆ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದರು.
ಧುರೀಣರಾದ ಸುಭಾಷಚಂದ್ರ ಪಾಟೀಲ್, ವೈ.ಬಿ. ಇನಾಮತಿ, ವಿಜಯಸ್ವಾಮಿ, ಬಾಬಾಜಾನ ಮುಧೋಳ, ಕುತುಬುದ್ದಿನ್  ಮತ್ತಿತರರು ಉಪಸ್ಥಿತರಿದ್ದರು.

Leave a Comment