ರೈತರು-ಮಾರಾಟಗಾರರ ಸಭೆ ನಿರ್ವಹಣೆಗೆ ಸಲಹೆ

ಮಳೆಯಾಧರಿತ ಪ್ರದೇಶ : ತೋಟಗಾರಿಕೆ ಆದಾಯ ಕೃಷಿ
ರಾಯಚೂರು.ಡಿ.01- ಮಳೆಯಾಧರಿತ ಪ್ರದೇಶಗಳಲ್ಲಿ ಹಣ್ಣು ಹಂಪಲ ತೋಟಗಾರಿಕೆ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಸದುಪಯೋಗ ಪಡೆಸಿಕೊಳ್ಳಬೇಕೆಂದು ಕೃಷಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಧಾನಮಂತ್ರಿ ಕೃಷಿ ಆದಾಯ ದ್ವಿಗುಣ ಟಾಸ್ಕ್‌ಫೋರ್ಸ್ ಅಧ್ಯಕ್ಷರಾಗಿರುವ ಡಾ.ಅಶೋಕ ದಳವಾಯಿ ಅವರು ಹೇಳಿದರು.
ಅವರು ನಿನ್ನೆ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಇಂದು ಅವರನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಹಣ್ಣು-ಹಂಪಲ ತೋಟಗಾರಿಕೆ ಅತ್ಯಂತ ಲಾಭದಾಯಕವಾಗಿದೆ. ಹಣ್ಣು ಬೆಳೆಯುವ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವುದು ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಹಣ್ಣು ಖರೀದಿದಾರರ ಮಧ್ಯೆ ಸಭೆ ನಡೆಸಿ, ಉಭಯರಿಗೆ ಅಗತ್ಯವಾದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಾಗಿದೆ.
ಈ ದಿಕ್ಕಿನಲ್ಲಿ ತೋಟಗಾರಿಕೆ ಇಲಾಖೆ ಕಾರ್ಯ ನಿರ್ವಹಿಸಬೇಕಾಗಿದೆ. ಕೇಂದ್ರ ಸರ್ಕಾರದ ಸಮಗ್ರ ತೋಟಗಾರಿಕೆ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಪ್ರಾಧಿಕಾರ ಮಂಡಳಿ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಇರುವ ಅನುದಾನ ಬಳಸಿಕೊಂಡು ಮಳೆಯಾಧರಿತ ಪ್ರದೇಶಗಳಲ್ಲಿ ತೋಟಗಾರಿಕೆಯನ್ನು ಹೆಚ್ಚಿಸಬೇಕು. ಹಣ್ಣು ಬೆಳೆಗಾರರಿಗೆ ಕೋಲ್ಟ್ ಸ್ಟೋರೇಜ್, ಪ್ಯಾಕಿಂಗ್ ಹೌಸ್ ಸೇರಿದಂತೆ ರಿಫರ್ ವಾಹನ ಸೌಲಭ್ಯ ಒದಗಿಸಿದರೇ, ಇದರಿಂದ ರೈತರಿಗೆ ಅನುಕೂಲವಾಗುತ್ತದೆ.
ಹಣ್ಣು ಬೆಳೆಗಾರರಿಗೆ ಹೆಚ್ಚಿನ ಸೌಲಭ್ಯ ಮತ್ತು ಮಾರುಕಟ್ಟೆ ವ್ಯವಸ್ಥೆ ದೊರೆತರೇ, ಮಳೆಯಾಧರಿತ ಪ್ರದೇಶಗಳಲ್ಲಿ ರೈತರು ತೋಟಗಾರಿಕೆ ಮೂಲಕ ಹೆಚ್ಚಿನ ಆದಾಯ ಪಡೆಲು ಸಾಧ್ಯವಾಗುತ್ತದೆ. ರೈತರ ಆದಾಯ ಮಟ್ಟ ಹೆಚ್ಚಿಸಲು ಅವರ ಮಾರುಕಟ್ಟೆ ವ್ಯವಸ್ಥೆ ವಿಸ್ತರಿಸುವುದು ಅತ್ಯಂತ ಪ್ರಮುಖವಾಗಿದೆ. ಈ ದಿಕ್ಕಿನಲ್ಲಿ ಎಲ್ಲರೂ ಹೆಚ್ಚಿನ ಕಾರ್ಯ ಹಾಗೂ ಗಮನ ನೀಡಬೇಕು. ಯಾವ ಪ್ರದೇಶದಲ್ಲಿ ಯಾವ ಹಣ್ಣು ಬೆಳೆಯಬೇಕು. ಅದರ ಗುಣಮಟ್ಟ ನಿರ್ಧರಿಸಲು ರೈತರು ಮತ್ತು ಹಣ್ಣು ಮಾರಾಟಗಾರರ ಸಭೆ ನಿರ್ವಹಣೆಯಿಂದ ಅನುಕೂಲವಾಗುತ್ತದೆ. ಕೃಷಿ ವಿಶ್ವವಿದ್ಯಾಲಯ ಈ ದಿಕ್ಕಿನಲ್ಲಿ ಹಮ್ಮಿಕೊಂಡ ಕಾರ್ಯಾಗಾರ ಅತ್ಯಂತ ಅರ್ಥಪೂರ್ಣವಾಗಿದೆ. ಈ ಕಾರ್ಯಾಗಾರದಲ್ಲಿ ತೋಟಗಾರಿಕೆಯಿಂದ ರೈತರು ಆದಾಯ ಮೂಲ ಹೆಚ್ಚಿಸಿಕೊಂಡ ಅನೇಕ ನಿದರ್ಶನ ನೀಡಿರುವುದು ಈ ಭಾಗದಲ್ಲಿ ತೋಟಗಾರಿಕೆಗೆ ಅನುಕೂಲಕರವಾದ ವಾತಾವರಣವಿದೆಂದರು.

Leave a Comment