ರೈತರಿಗೆ : ಮಾಸಿಕ 3000 ರೂ. ಪಿಂಚಣಿ ಮಾಹಿತಿ

 

ಶಿವಮೊಗ್ಗ:ಅ.೯. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ ರೈತರಿಗೆ ವೃದ್ಧಾಪ್ಯ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ.
60 ವರ್ಷವಾದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾಸಿಕ 3000 ರೂ. ಪಿಂಚಣಿ ನೀಡಲಾಗುವುದು. ಗರಿಷ್ಠ ಎರಡು ಹೆಕ್ಟೇರ್ ಭೂ ಹಿಡುವಳಿ ಹೊಂದಿರುವ 18 ರಿಂದ 40 ವರ್ಷದೊಳಗಿನ ರೈತರು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ವಯೋಮಿತಿಯ ಆಧಾರದ ಮೇಲೆ ಮಾಸಿಕ 55 ರೂಪಾಯಿಯಿಂದ 200 ರೂಪಾಯಿಯವರೆಗೆ ಮಾಸಿಕ ಪಿಂಚಣಿ ವಂತಿಗೆ ನೀಡಬೇಕಿದೆ. ರೈತರು ಪಾವತಿಸುವ ವಂತಿಗೆ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರವು ಪಿಂಚಣಿ ನಿಧಿಗೆ ಪಾವತಿಸಲಿದೆ.
ನೊಂದಣಿಗೆ ಆಸಕ್ತರಾದ ರೈತರು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಮಾಹಿತಿ, ಜನ್ಮದಿನಾಂಕ, ನಾಮನಿರ್ದೇಶನದ ದಾಖಲೆ ಸಹಿತ ನಾಗರಿಕ ಸೇವಾ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡು ಯೋಜನೆಯ ಸದ್ಭಳಕೆ ಮಾಡಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Leave a Comment