ರೈತರಿಗೆ ಅನ್ಯಾಯವಾಗದಂತೆ ತೊಗರಿ  ಖರೀದಿ : ಕಾರಜೋಳ

ಕಲಬುರಗಿ ಫೆ 28: ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ತೊಗರಿ ಖರೀದಿಗೆ ಮುಂದಾಗಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು  ಹೇಳಿದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಹುಟ್ಟು ಹಬ್ಬದ ಅಂಗವಾಗಿ ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿಂದು ಆಯೋಜಿಸಿದ ಉದ್ಯೋಗ ಮೇಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು  ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರದಲ್ಲಿ ಕೂತವರು ಯಾರು ಮಾರ್ವಾಡಿಗಳಲ್ಲ.ಸರ್ಕಾರದಲ್ಲಿ ಇರುವವರು ಎಲ್ಲರೂ ಕೂಡ ರೈತರ ಮಕ್ಕಳೆ.ಆದ್ದರಿಂದ ರೈತರು ಚಿಂತಿಸುವ ಅಗತ್ಯವಿಲ್ಲ ಎಂದರು.

ಕೇಂದ್ರ ಸರ್ಕಾರದಿಂದ ಮಹದಾಯಿ ಅಧಿಸೂಚನೆ ಪ್ರಕಟಗೊಂಡು ಮಹದಾಯಿ ಹೋರಾಟಕ್ಕೆ ಐತಿಹಾಸಿಕ ತೀರ್ಪು ಬಂದಿದೆ.13.2 ಟಿ ಎಮ್ ಸಿ ಹಂಚಿಕೆ ಮಾಡುವ ಮೂಲಕ ನಾಡಿನ ರೈತರಿಗೆ ಸಿಕ್ಕ ಜಯ ಇದು.

ಜಲ ವಿದ್ಯುತ್ ಯೋಜನೆಗೆ 8.02 ಬಂಡೂರಿ ನಾಲೆ ,  ಕಳಸಾ ನಾಲೆಗೆ ,ಕುಡಿಯುವ ನೀರಿಗಾಗಿ ಹಂಚಿಕೆ ಆಗಿದೆ

ಸರ್ಕಾರ ಕ್ರಿಯಾ ಯೋಜನೆ ರೂಪಿಸುತ್ತದೆ.ನಮಗೆ ಸಿಕ್ಕಿರುವ ಒಂದು ಹನಿ ನೀರು ಕೂಡ ವೇಸ್ಟ್ ಆಗದಂತೆ ಬಳಕೆ ಮಾಡಿಕೊಳ್ಳುತ್ತೇವೆ.ಗೋವಾದವರು ಅನ್ಯಾಯ ಆಗಿದೆ ಅಂತಾ ಅವರು ಸುಪ್ರೀಂ ಮೋರೆ ಹೋಗಿದ್ದಾರೆ.ನಾವು ಕೂಡ ನಮ್ಮ ಹೋರಾಟ ಮುಂದುವರೆಸುತ್ತೇವೆ.ನೀರಿನ ವಿವಾದದಲ್ಲಿನ ಹೋರಾಟ ಮುಗಿಯದ ಅಧ್ಯಾಯ.ಹಾಗಾಗಿ ನಾವು ಇದರ ವಿರುದ್ದ ಹೋರಾಟ ನಡೆಸಿಯೇ ನಡೆಸುತ್ತೇವೆ ಎಂದರು.

ಶಾಸಕ ಬಸವನಗೌಡ ಯತ್ನಾಳ ಹೇಳಿಕೆ ಬಗ್ಗೆ  ಕೇಳಿದ ಪ್ರಶ್ನೆಗೆ ಯತ್ನಾಳ ವಿಚಾರ ನನಗೆ ಕೇಳಬೇಡಿ ಅಂತಾ ಕೈ ಮುಗಿದರು.

ಹಿರಿಯ ಸಂಶೋಧಕ ಪ್ರೊ ಷ ಶೆಟ್ಟರ ನಿಧನಕ್ಕೆ  ಸಂತಾಪ ವ್ಯಕ್ತಪಡಿಸಿದ ಅವರು , ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ 85 ನೆಯ ಅ.ಭಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ ಶೆಟ್ಟರ್ ಭಾಗಿಯಾಗಿದ್ದರು.27 ಸಂಶೋಧನಾ ಕೃತಿಗಳನ್ನು ಬರೆದಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.ಅವರ ಕುಟುಂಬ ವರ್ಗದವರಿಗೆ ದೇವರು ದುಃಖ  ಭರಿಸುವ ಶಕ್ತಿ ನೀಡಲಿ ಎಂದರು.

 

 

Leave a Comment